Light
Dark

ರಾಜ್ಯಕ್ಕೆ ಬಾರದ ಪ್ರಜ್ವಲ್:‌ ಟಿಕೆಟ್‌ ಬುಕ್‌ ಮಾಡಿದರೂ ವಿಮಾನ ಹತ್ತದ ಸಂಸದ

ಬೆಂಗಳೂರು: ಲೈಂಗಿಕ ಪ್ರಕರಣದ ಆರೋಪಿ ಪ್ರಜ್ವಲ್‌ ರೇವಣ್ಣ ಅವರು ಜರ್ಮನಿಯಿಂದ ಇಂದು(ಮೇ.15) ರಾಜ್ಯ ರಾಜಾಧಾನಿಗೆ ಆಗಮಿಸುತ್ತಾರೆ ಎನ್ನುವ ಸುದ್ದಿ ಇತ್ತು. ಆದರೆ ಪ್ರಜ್ವಲ್‌ ಇಂದೂ ಸಹ ರಾಜ್ಯಕ್ಕೆ ಮರಳಿ ಬಾರದೆ ವಿದೇಶದಲ್ಲೆ ಉಳಿದುಕೊಂಡಿದ್ದು, ಬೆಂಗಳೂರಿಗೆ ವಾಪಸ್‌ ಆಗುವುದನ್ನು ಮತ್ತೆ ಮುಂದೂಡಿದ್ದಾರೆ.

ಪ್ರಜ್ವಲ್‌ ಇಂದು (ಮೇ.15) ಬೆಂಗಳೂರಿಗೆ ಆಗಮಿಸುವುದಕ್ಕೆ ಸಿದ್ಧತೆ ಮಾಡಿಕೊಂಡು, ವಿಮಾನ ಟಿಕೆಟ್‌ ಸಹ ಬುಕ್‌ ಮಾಡಿದ್ದರು. ಈ ಮಾಹಿತಿ ತಿಳಿಯುತ್ತಿದಂತೆ ಎಸ್‌ಐಟಿ ಅಧಿಕಾರಿಗಳು ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಕಾದು ಕುಳಿತ್ತಿದ್ದರು. ಆದರೆ ಜರ್ಮನಿಯಿಂದ ಬುಧುವಾರ (ಮೇ.15) ಹೊರಟ ವಿಮಾನದಲ್ಲಿ ಪ್ರಜ್ವಲ್‌ ಇಲ್ಲ ಎಂಬ ಮಾಹಿತಿ ಸಂಜೆ ವೇಳೆಗೆ ಎಸ್‌ಐಟಿ ಅಧಿಕಾರಿಗಳಿಗೆ ಲಭಿಸಿತು. ಪ್ರಜ್ವಲ್‌ ಈಗಾಗಲೇ ಎರಡು ಸಲ ವಿಮಾನ ಟಿಕೆಟ್‌ ಬುಕ್‌ ಮಾಡಿ ವಿಮಾನ ಹತ್ತದೆ ಅಲ್ಲೇ ಉಳಿದುಕೊಂಡಿದ್ದರು. ಇದೀಗ ಮತ್ತೊಮ್ಮೆ ಬುಕ್‌ ಮಾಡಿದ ಟಿಕೆಟ್‌ನ್ನು ಕೊನೆಕ್ಷಣದಲ್ಲಿ ರದ್ದುಪಡಿಸಿದ್ದಾರೆ.

ಪ್ರಜ್ವಲ್‌ ತಮ್ಮ ವಕೀಲರ ಜೊತೆ ನಿರಂತರ ಸಂಪರ್ಕದಲ್ಲಿದ್ದು, ವಕೀಲರು ನೀಡುತ್ತಿರುವ ಸೂಚನೆಗಳನ್ನು ಪ್ರಜ್ವಲ್‌ ಪಾಲಿಸುತ್ತಿದ್ದಾರೆ ಎನ್ನಲಾಗಿದೆ. ವಕೀಲರು ಯಾವಾಗ ಬರಲು ಹೇಳುತ್ತಾರೋ ಅಂದು ಪ್ರಜ್ವಲ್‌ ರಾಜ್ಯಕೆ ಬರುವ ನಿರೀಕ್ಷೆಯಿದೆ ಎನ್ನಲಾಗಿದೆ.

ಮಹಿಳೆ ಅಪಹರಣ ಪ್ರಕರಣದಲಿ ಬಂಧನದಲ್ಲಿದ್ದ ಶಾಸಕ ರೇವಣ್ಣಗೆ ಷರತ್ತುಬದ್ಧ ಜಾಮೀನು ಸಿಕ್ಕಿದ್ದು ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಬಿಡುಗಡೆಯಾದಂದಿನಿಂದ ರೇವಣ್ಣ ಟೆಂಪಲ್‌ ರನ್‌ ಮುಂದುವರೆಸಿದ್ದು, ಇಷ್ಟಾರ್ಥ ದೇವಾಲಯಕ್ಕೆ ಭೇಟಿ ನೀಡಿ ದೇವರ ಮೊರೆ ಹೋಗಿದ್ದಾರೆ.