ಹಾಸನ: ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ರೇವಣ್ಣ ಹಾಗೂ ಪ್ರಜ್ವಲ್ ವಿರುದ್ಧ ದೂರು ನೀಡಿದ್ದ ಮಹಿಳೆ ಸರಿಯಿಲ್ಲ ಎಂದು ಆಕೆಯ ವಿರುದ್ಧವೇ ಸಂತ್ರಸ್ತ ಮಹಿಳೆಯ ಗಂಡನ ಮನೆಯವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಜ್ವಲಸ ಅವರ ಅಶ್ಲೀಲ ವಿಡಿಯೋ ಪ್ರಕರಣ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತಯೇ ಇಂದು (ಏ.29) ಹಾಸನದಲ್ಲಿ ಸಂಸ್ರಸ್ತೆ ಗಂಂಡನ ತಾಯಿ ಗೌರಮ್ಮ ಸುದ್ದಿಗೋಷ್ಠಿ ನಡೆಸಿದ್ದಾರೆ.
ಭಾವನಿ ಅಮ್ಮ ನಮ್ಮ ಕುಟುಂಬಕ್ಕೆ ತುಂಬಾ ಸಹಾಯ ಮಾಡಿದ್ದಾರೆ. ಅವರು ನಮ್ಮ ಕುಟುಂಬದ ಜೊತೆ ಇದ್ದರು. ಯಾರೋ ಹೆದರಿಸಿ ಇವರನ್ನು ಕಳೆದುಕೊಂಡು ಹೋಗಿ ದೂರು ಕೊಡಿಸಿದ್ದಾರೆ. ಚುನಾವಣೆ ಸಮಯದಲ್ಲಿ ಗೌಡರ ಮನೆಗೆ ಕಪ್ಪು ಚುಕ್ಕೆ ತರಲು ಈ ಕೆಲಸ ಮಾಡಿದ್ದಾರೆ, ಅಷ್ಟಕ್ಕೂ ಐದು ವರ್ಷ ಹಿಂದೆ ಸುಮ್ನೆ ಇದ್ದು, ಇವಾಗ ಯಾಕೆ ದೂರು ನೀಡಿದ್ದಾರೆ ಎಂದು ರೇವಣ್ಣ, ಪ್ರಜ್ವಲ್ ಪರ ಬ್ಯಾಟ್ ಬೀಸಿದ್ದಾರೆ.
ಮಂಜುನಾಥ ಸ್ವಾಮಿಯ ಮೇಲೆ ಪ್ರಮಾಣ ಮಾಡುತ್ತೇವೆ ಗೌಡರ ಕುಟುಂಬ ತಪ್ಪು ಮಾಡಿಲ್ಲ. ದೂರು ನೀಡಿರುವ ಮಹಿಳೆ ಸರಿಯಿಲ್ಲ. ತುಂಬಾ ಸಾಲಾ ಮಾಡಿಕೊಂಡಿದ್ದರು. ಅಲ್ಲದ್ದೇ ಮಹಿಳೆಯ ನಡತೆ ಕೂಡ ಸರಿಯಿಲ್ಲ ಎಂದಿದ್ದಾರೆ.





