ಬೆಂಗಳೂರು : ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಅಡಾಲ್ಛ್ ಹಿಟ್ಲರ್‌ಗೆ ಹೋಲಿಸಿ ಸಾಮಾಜಿಕ ಜಾಲತಾಣದಲ್ಲಿ ವಿವಾದಾತ್ಮಕ ಪೋಸ್ಟ್ ಮಾಡಿದ್ದ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಪ್ರತಿಭಟನೆಗಿಳಿದಿದ್ದ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ಗುರುವಾರ ವಶಕ್ಕೆ ಪಡೆದಿದ್ದಾರೆ.
ರಾಜ್ಯ ಬಿಜೆಪಿ ನಾಯಕರ ವಿರುದ್ಧ ತೀವ್ರವಾಗಿ ಕಿಡಿಕಾರಿರುವ ಕಾಂಗ್ರೆಸ್ ಕಾರ್ಯಕರ್ತರು ಗುರುವಾರ ಬೆಳಿಗ್ಗೆ ಬಿಜೆಪಿ ಕಚೇರಿಯ ಬಳಿ ಪ್ರತಿಭಟನೆಗಿಳಿದಿದ್ದರು. ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಸ್ಥಳದಲ್ಲಿದ್ದ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದ ಬಿಜೆಪಿ, ಭಾರತದಲ್ಲಿನ ರಾಷ್ಟ್ರೀಯ ತುರ್ತು ಪರಿಸ್ಥಿತಿ ಕುರಿತು ಗ್ರಾಫಿಕ್ಸ್ ವಿಡಿಯೋವೊಂದನ್ನು ಹಂಚಿಕೊಂಡಿತ್ತು. ಈ ವಿಡಿಯೋ ಸಂಬಂಧ ಬಿಜೆಪಿ ವಿರುದ್ಧ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಪ್ರಧಾನ ಕಾರ್ಯದರ್ಶಿ ಎಸ್ .ಮನೋಹರ್ ಅವರು ದೂರು ದಾಖಲಿಸಿದ್ದಾರೆ.
ದೂರಿನಲ್ಲಿ ಇಂದಿರಾ ಗಾಂಧಿ ಬಗ್ಗೆ ಹಾಕಿರುವ ಅವಹೇಳನಕಾರಿ ಪೋಸ್ಟ್ ಸಮಾಜದಲ್ಲಿ ಗಲಭೆಯುಂಟಾಗಿ, ಧರ್ಮಗಳ ಮಧ್ಯೆ ವೈರತ್ವವನ್ನುಂಟು ಮಾಡುವಂತಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಬಿಜೆಪಿ ವಿರುದ್ಧ ಎಫ್‌ಐಆರ್ ದಾಖಲಾಗಿರುವ ಕುರಿತು ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಪರಮೇಶ್ವರ್ ಅವರು, ಕೆಲವು ದೂರುಗಳ ಆಧಾರದ ಮೇಲೆ ಅಥವಾ ಜನರಲ್ಲಿ ದ್ವೇಷವನ್ನು ಉಂಟುಮಾಡುವ ಕೆಲವು ವಿಷಯಗಳಿದ್ದರೆ ಸ್ವಯಂ ಪ್ರೇರಿತವಾಗಿ ಎಫ್‌ಐಆರ್‌ಗಳನ್ನು ದಾಖಲಿಸಲಾಗುತ್ತದೆ. ಅನೇಕ ವರ್ಷಗಳ ಕಾಲ ದೇಶಕ್ಕೆ ಸೇವೆ ಸಲ್ಲಿಸಿದ ನಾಯಕನನ್ನು ಯಾರಾದರೂ ದೂಷಿಸಲು ಪ್ರಯತ್ನಿಸಿದರೆ ಮತ್ತು ಆ ಸಮಯದಲ್ಲಿನ ಸಕಾರಾತ್ಮಕ ಬೆಳವಣಿಗೆಯನ್ನು ಕೆಲವರು ಆಕ್ಷೇಪಿಸದರೆ, ಜನರು ವಿರೋಽಸುತ್ತಾರೆಂದು ಹೇಳಿದ್ದಾರೆ.
ವಿವಾದ ಏನು?
ಬುಧವಾರ ಕರ್ನಾಟಕ ರಾಜ್ಯ ಬಿಜೆಪಿ ಪಕ್ಷದ ಅಽಕೃತ ಎಕ್ಸ್ ಖಾತೆಯಲ್ಲಿ ಸಂಜೆ ೩.೫೪ಗಂಟೆಗೆ ಇಂದಿರಾ ಇಂಡಿಯಾ ಇಂದಿರಾ ಎಂದು ಬರೆದು, ೦.೩೮ ನಿಮಿಷಗಳ ವಿಡಿಯೋವನ್ನು ಅಪ್‌ಲೋಡ್ ಮಾಡಿ, ಸದರಿ ವಿಡಿಯೋದಲ್ಲಿ ಭಾರತದ ತುರ್ತು ಪರಿಸ್ಥಿತಿ ಸಮಯಕ್ಕೆ ಸಂಬಂಽಸಿದ್ದಾಗಿದ್ದು, ಸದರಿ ವಿಡಿಯೋದಲ್ಲಿ ಇಂದಿರಾಗಾಂಽಯವರ ಫೋಟೋವನ್ನು ಹಿಟ್ಲರ್ ರೀತಿ ಗ್ರಾಫಿಕ್ಸ್ ಮಾಡಲಾಗಿದೆ.





