Mysore
29
few clouds

Social Media

ಮಂಗಳವಾರ, 24 ಮಾರ್ಚ್ 2026
Light
Dark

ರಾಜ್ಯದಲ್ಲಿ 8 ಲಕ್ಷ ಬಿಪಿಎಲ್‌ ಕಾರ್ಡ್‌ ರದ್ದಾಗುವ ಸಾಧ್ಯತೆ

ಬೆಂಗಳೂರು: ರಾಜ್ಯದಲ್ಲಿ ಬಿಪಿಎಲ್‌ ಕಾರ್ಡ್‌ ಹೊಂದಿರುವವರಿಗೆ ಬಿಗ್‌ ಶಾಕ್‌ ಎದುರಾಗಿದ್ದು, 8 ಲಕ್ಷ ಬಿಪಿಎಲ್‌ ಕಾರ್ಡ್‌ ರದ್ದಾಗುವ ಸಾಧ್ಯತೆಯಿದೆ.

ಕೋಟ್ಯಾಧಿಪತಿಗಳು ಕೂಡ ಬಿಪಿಎಲ್‌ ಕಾರ್ಡ್‌ ಪಡೆದು ಸರ್ಕಾರದ ಯೋಜನೆಗಳನ್ನು ಬಳಸಿಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ 8 ಲಕ್ಷ ಕಾರ್ಡ್‌ ರದ್ದಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

ಬೆಂಗಳೂರಿನಲ್ಲೂ ಕೂಡ ಲಕ್ಷ ಲಕ್ಷ ಕಾರ್ಡ್‌ ರದ್ದಾಗಲಿದ್ದು, ಶೀಘ್ರವೇ ಆಹಾರ ಇಲಾಖೆ ಈ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇನ್ನು ಮಾಹಿತಿ ಪ್ರಕಾರ ವಿವಿಧ ಕಂಪನಿಗಳಲ್ಲಿ ಡೈರೆಕ್ಟರ್‌ ಆಗಿರುವವರ ಬಳಿಯೂ ಕಾರ್ಡ್‌ ಪತ್ತೆಯಾಗಿದೆ. ಅಕ್ರಮವಾಗಿ ಬಿಪಿಎಲ್‌ ಕಾರ್ಡ್‌ ಪಡೆದವರಿಗೆ ಸರ್ಕಾರ ಶಾಕ್‌ ನೀಡಲು ಮುಂದಾಗಿದ್ದು, ಶೀಘ್ರದಲ್ಲೇ ಅನರ್ಹರ ಕಾರ್ಡ್‌ ರದ್ದು ಮಾಡಲಿದೆ ಎನ್ನಲಾಗಿದೆ.

Tags:
error: Content is protected !!