Mysore
27
moderate rain

Social Media

ಭಾನುವಾರ, 20 ಏಪ್ರಿಲ 2025
Light
Dark

ಪ್ರೀತಂಗೌಡ ಆಪ್ತನ ಮನೆಯಲ್ಲಿ ಪತ್ತೆಯಾಯ್ತು 10 ಪೆನ್‌ಡ್ರೈವ್‌ ಹಾಗೂ ಹಾರ್ಡ್‌ ಡಿಸ್ಕ್‌

ಹಾಸನ: ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಅವರ ಪೆನ್‌ಡ್ರೈವ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಜಿಲ್ಲೆಯಾದ್ಯಂತ ವಿವಿಧೆಡೆ ದಾಳಿ ಮಾಡಿರುವ ಎಸ್‌ಐಟಿ ತಂಡಕ್ಕೆ ಬಿಜೆಪಿ ಮುಖಂಡ ಪ್ರೀತಂ ಗೌಡ ಅವರ ಆಪ್ತರ ಮನೆಯಲ್ಲಿ 10 ಪೆನ್‌ಡ್ರೈವ್‌ ಹಾಗೂ ಹಾರ್ಡ್‌ ಡಿಸ್ಕ್‌ಗಳು ಪತ್ತೆಯಾಗಿವೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಂಧಿತರಾಗಿರುವ ಆರೋಪಿಗಳ ಮನೆ ಮೇಲೆ ಎಸ್‌ಐಟಿ ದಾಳಿ ಮಾಡಿದ್ದು, ಪೆನ್‌ಡ್ರೈವ್‌ ಹಾಗೂ ಹಾರ್ಡ್‌ ಡಿಸ್ಕ್‌ಗಳು ಪತ್ತೆಯಾಗಿವೆ.

ಉಳಿಂದತೆ ಜಿಲ್ಲೆಯ ನಾನಾ ಕಡೆ ದಾಳಿ ಮಾಡಿದ್ದು, ಏಳು ಪೆನ್‌ಡ್ರೈವ್‌, ಆರು ಹಾರ್ಡ್‌ ಡಿಸ್ಕ್‌, ಲ್ಯಾಪ್‌ಟಾಪ್‌, ಡೆಸ್ಕ್‌ಟಾಪ್‌ ಸಿಸಿ ಕ್ಯಾಮರಾ ಸೇರಿದಂತೆ ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಸಿಕ್ಕ ದಾಖಲೆಗಳನ್ನೆಲ್ಲಾ ವಿಧಿವಿಧಾನಕ್ಕೆ ಕಳುಹಿಸಿದ್ದು, ಪ್ರಯೋಗಾಲಯದಿಂದ ವರದಿ ಬಂದ ಬಳಿಕವಷ್ಟೇ ಉಳಿದ ವಿಚಾರಗಳು ಬೆಳಕಿಗೆ ಬರಲಿವೆ.

Tags: