ಮುಧೋಳ : ರಾಜ್ಯದಲ್ಲಿ ಮತ್ತೆ ರೈತ ಹೋರಾಟದ ತೀವ್ರತೆ ಹೆಚ್ಚಾಗುತ್ತಿದೆ. ಕಬ್ಬು ಬೆಳೆಗಾರರು ನಡೆಸುತ್ತಿದ್ದ ಹೋರಾಟ ಒಂದು ಹಂತಕ್ಕೆ ಶಾಂತವಾಗಿತ್ತು. ಆದರೆ ಮುಧೋಳದಲ್ಲಿ ಕಬ್ಬು ಬೆಳೆಗಾರರು ಹೋರಾಟದ ಕಿಚ್ಚಿಗೆ ಟ್ರಾಕ್ಟರ್ ಭಸ್ಮವಾಗಿದೆ. ಕಬ್ಬು ತುಂಬಿ ಕಾರ್ಖಾನೆಗೆ ಹೊರಟ್ಟಿದ್ದ ಟ್ರಾಕ್ಟರ್ ನಿಲ್ಲಿಸಿದ ರೈತರು ಬೆಂಕಿ ಇಟ್ಟಿದ್ದಾರೆ. ಇಡೀ ಕಬ್ಬಿನ ಜೊತೆ ಟ್ರಾಕ್ಟರ್ ಬೆಂಕಿಯಲ್ಲಿ ಭಸ್ಮವಾಗಿದೆ. ಇದೀಗ ನೂರೂರು ರೈತರು ಇದೀಗ ಕಾರ್ಖಾನೆಯತ್ತ ನುಗ್ಗಿದ್ದಾರೆ.
ಮುಧೋಳದ ಸಮೀರವಾಡಿ ಸಕ್ಕರೆ ಕಾರ್ಖಾನೆಗೆ ಹೊರಟ ರೈತರು, ದಾರಿ ಮಧ್ಯೆ ಕಾರ್ಖಾನೆಯತ್ತ ಹೊರಟಿದ್ದ ಕಬ್ಬು ಟ್ರಾಕ್ಟರ್ ಪಲ್ಟಿ ಮಾಡಿ ಬೆಂಕಿ ಇಟ್ಟಿದ್ದರೆ. ಟ್ರ್ಯಾಕ್ಟರನಲ್ಲಿದ್ದ ಕಬ್ಬಿಗೆ ಬೆಂಕಿ ಹಚ್ಚಿ ರೈತರು ಆಕ್ರೋಶ ಹೊರಹಾಕಿದ್ದಾರೆ. ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪೂರ ಹೊರವಲಯದಲ್ಲಿ ಘಟನೆ ನಡೆದಿದೆ. ಕಬ್ಬಿಗೆ 3,300 ರೂಪಾಯಿ ಬೆಲೆ ನೀಡುವಂತೆ ಪಟ್ಟು ಹಿಡಿದಿರುವ ರೈತರು ಪ್ರತಿಭಟನೆ ತೀವ್ರಗೊಳಿಸಿದ್ದಾರೆ. ಇತ್ತ 3,250 ರೂಪಾಯಿ ನೀಡುವುದಾಗಿ ಸರ್ಕಾರ ಒಪ್ಪಿಕೊಂಡಿದೆ. ಆದರೆ ರೈತರ ಪಟ್ಟು ಸಡಿಸಿಲ್ಲ.
ಇದನ್ನೂ ಓದಿ:-ಮೈಸೂರು ಸೇರಿದಂತೆ 9 ಜಿಲ್ಲೆಗೆ ಕೈಗಾರಿಕಾ ಕಾರಿಡಾರ್ : ಗೋಯಲ್ ಜೊತೆ ಎಚ್‌ಡಿಕೆ ಮಾತುಕತೆ
ಸಮೀರವಾಡಿ ಕಾರ್ಖಾನೆ ವಿರುದ್ಧ ರೈತರು ಆಕ್ರೋಶ ಹೊರಹಾಕುತ್ತಿದ್ದಾರೆ. ರೈತರಿಗೆ ಬಾಕಿ ಸೇರಿ ಪ್ರಸಕ್ತ ಸಾಲಿನ ಕಬ್ಬಿನ ದರ ವಿಚಾರವಾಗಿ ರೈತರ ಆಕ್ರೋಶಕ್ಕೆ ಬಾಗಲಕೋಟೆ ಇದೀಗ ರಣಾಂಗಣವಾಗಿದೆ.





