ಬೆಂಗಳೂರು: ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರಿಂದ ಕರಡು ಬಿಲ್ ಅಂತಿಮ ಮಾಡಿದ ಕೂಡಲೇ ಸುಗ್ರಿವಾಜ್ಞೆ ಜಾರಿಯಾಗಲಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದ್ದಾರೆ.
ನಗರದಲ್ಲಿ ಇಂದು (ಫೆ.3) ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರಿಗೆ ಆರೋಗ್ಯದಲ್ಲಿ ಸ್ವಲ್ಪ ಮಟ್ಟಿನ ತೊಂದರೆ ಇದೆ. ಕರಡು ಬಿಲ್ ಅನ್ನು ಅಂತಿಮವಾಗಿ ಅವರು ನೋಡಿ ಸಹಿ ಹಾಕಬೇಕು. ಅವರು ಸಹಿ ಮಾಡಿ ಡ್ರಾಫ್ಟ್ ಕಳುಹಿಸುತ್ತಾರೆ ಆದಾದ ಮೇಲೆ ಸುಗ್ರಿವಾಜ್ಞೆ ಜಾರಿ ಆಗುತ್ತದೆ ಎಂದು ತಿಳಿಸಿದರು.
ಈಗ ಇರೋ ಕಾನೂನಿಗೆ ಕೆಲವು ಕಾನೂನುಗಳನ್ನು ಸೇರಿಸೋ ಬಗ್ಗೆ ಚರ್ಚೆ ಆಗಿದೆ. ಹಲವು ಹೊಸ ಕಾನೂನುಗಳನ್ನು ಸೇರ್ಪಡೆ ಮಾಡಿದ್ದೇವೆ. ಆದರೆ, ಕರಡು ಪ್ರತಿಯನ್ನು ನಾನು ನೋಡಿಲ್ಲ. ಸಿಎಂ ಸಹಿ ಆದ ಕೂಡಲೇ ಸುಗ್ರಿವಾಜ್ಞೆ ಫೈನಲ್ ಅಗಲಿದೆ ಎಂದು ಹೇಳಿದರು.