ಬೆಂಗಳೂರು: ಚಾಮರಾಜನಗರ ಜಿಲ್ಲೆಯ ಎಂಎಂ ಹಿಲ್ಸ್ ವನ್ಯಜೀವಿ ಅಭಯಾರಣ್ಯ ವ್ಯಾಪ್ತಿಯಲ್ಲಿ ಪೊಲೀಸ್ ಚೆಕ್‌ಪೋಸ್ಟ್ ರಚಿಸಲು ಸರ್ಕಾರ ಆದೇಶ ಹೊರಡಿಸಿದೆ.
ಅಪರಾಧಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ರಾಜ್ಯ ಅರಣ್ಯ ಇಲಾಖೆ ಜೂನ್‌ನಲ್ಲಿ ಈ ಪ್ರಸ್ತಾವನೆ ಮಾಡಿತ್ತು. ನವೆಂಬರ್.28ರಂದು ಚೆಕ್‌ಪೋಸ್ಟ್ ಸ್ಥಾಪಿಸಲು ಆದೇಶ ಹೊರಡಿಸಲಾಗಿದೆ.
ಇದನ್ನು ಓದಿ: ಹನೂರು ಕ್ಷೇತ್ರಕ್ಕೆ ನೀರಾವರಿ ವ್ಯವಸ್ಥೆ ಕಲ್ಪಿಸಲು ಸಂಸದ ಸುನೀಲ್ ಬೋಸ್ ಸೂಚನೆ: ಮಧುವನಹಳ್ಳಿ ಎಸ್.ಶಿವಕುಮಾರ್
ರಾಜ್ಯದ ಅರಣ್ಯ ಪ್ರದೇಶದಲ್ಲಿ ಸ್ಥಾಪಿಸಲಾಗುತ್ತಿರುವ ಮೊದಲ ಚೆಕ್‌ಪೋಸ್ಟ್ ಇದಾಗಿದೆ.
ಬೇಟೆ, ಗಡಿಯಾಚೆಗಿನ ಅಪರಾಧಗಳು ಹಾಗೂ ವನ್ಯಜೀವಿ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಎಂಎಂ ಹಿಲ್ಸ್‌ನಲ್ಲಿ ಪೊಲೀಸ್ ಠಾಣೆಯ ಅಗತ್ಯವಿತ್ತು.
ಚೆಕ್ ಪೋಸ್ಟ್ ನಿರ್ಮಾಣ ಮಾಡುವುದರಿಂದ ವನ್ಯಜೀವಿ ಅಪರಾಧಗಳನ್ನು ತ್ವರಿತವಾಗಿ ಪತ್ತೆಹಚ್ಚಲು ಮತ್ತು ಪರಿಹರಿಸಲು ಸಹಾಯ ಮಾಡುತ್ತದೆ.





