Mysore
23
clear sky

Social Media

ಬುಧವಾರ, 21 ಜನವರಿ 2026
Light
Dark

ರಾಜ್ಯದಲ್ಲಿ ನವೆಂಬರ್‌ ಕ್ರಾಂತಿ ಆಗೋದು ಪಕ್ಕಾ: ಆರ್.‌ಅಶೋಕ್‌ ಪುನರುಚ್ಛಾರ

ಮೈಸೂರು: ಬಿಜೆಪಿಯಿಂದ ಆಫರ್‌ ಬಂದಿತ್ತು. ಡಿಸಿಎಂ ಹುದ್ದೆ ಬೇಕೋ? ಜೈಲುವಾದ ಬೇಕೋ? ಎಂದು ದೆಹಲಿಯಿಂದ ಕರೆ ಮಾಡಿದ್ದರು. ಪಕ್ಷ ನಿಷ್ಠೆಗಾಗಿ ಜೈಲಿಗೆ ಹೋಗಿದ್ದೆ ಎಂದು ಹೇಳಿಕೆ ನೀಡಿರುವ ಡಿಸಿಎಂ ಡಿಕೆಶಿ ಹೇಳಿಕೆ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.

ಡಿಸಿಎಂ ಡಿ.ಕೆ.ಶಿವಕುಮಾರ್‌ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ವಿಪಕ್ಷ ನಾಯಕ ಆರ್.‌ಅಶೋಕ್‌ ಅವರು, ಡಿಕೆಶಿ ಅವರನ್ನು ಬಿಜೆಪಿಯಲ್ಲಿ ಯಾರು ಕರೆದರು? ಯಾವಾಗ ಕರೆದರು? ಎಂದು ಪ್ರಶ್ನಿಸಿದರು.

ಇದನ್ನು ಓದಿ: ಹಸಿವಿನ ಸಂಕಟ, ಅನ್ನದ ಮೌಲ್ಯ ನನಗೆ ಗೊತ್ತು: ಅದಕ್ಕೇ ಅನ್ನಭಾಗ್ಯ ಜಾರಿಗೆ ತಂದೆ: ಸಿ.ಎಂ.ಸಿದ್ದರಾಮಯ್ಯ

ಡಿಕೆಶಿ ಅವರನ್ನು ಬಿಜೆಪಿ ಯಾರು ಕರೆದರು ಎಂಬುದನ್ನು ಬಹಿರಂಗಪಡಿಸಲಿ. ಇಷ್ಟು ದಿನ ಸುಮ್ಮನಿದ್ದ ಡಿಕೆಶಿ ಈಗ ಅಧಿಕಾರ ಹಸ್ತಾಂತರ ಚರ್ಚೆ ಸಂದರ್ಭದಲ್ಲಿ ಈ ಹೇಳಿಕೆ ನೀಡುತ್ತಿದ್ದಾರೆ. ಈ ಮೂಲಕ ಅವರು ಕಾಂಗ್ರೆಸ್‌ಗೆ ಧಮ್ಕಿ ಹಾಕುತ್ತಿದ್ದಾರೆ ಎಂದು ಟಾಂಗ್‌ ಕೊಟ್ಟರು.

ಇನ್ನು ಮುಂದುವರಿದು ಮಾತನಾಡಿದ ಅವರು, ಇದೆಲ್ಲಾ ನವೆಂಬರ್‌ ಕ್ರಾಂತಿಯ ಬದಲಾವಣೆ. ಅಧಿಕಾರ ಹಸ್ತಾಂತರ ಸಮಯ ಬರುತ್ತಿದ್ದಾಗ ಹೇಳಿಕೆ ನೀಡುತ್ತಿದ್ದಾರೆ. ಇದು ಪಕ್ಕಾ ಮೆಸೇಜ್‌. ಇದು ಧಮ್ಕಿ. ನವೆಂಬರ್‌ ಕ್ರಾಂತಿ ಶುರುವಾಗುತ್ತದೆ ಎಂದು ಈಗ ಹೇಳುತ್ತಿದ್ದಾರೆ ಎಂದು ಟಾಂಗ್‌ ನೀಡಿದರು.

Tags:
error: Content is protected !!