Mysore
25
overcast clouds

Social Media

ಶನಿವಾರ, 16 ಮೇ 2026
Light
Dark

ಸಾವರ್ಕರ್‌ ಭಾವಚಿತ್ರ ತೆಗೆಯುವ ಪ್ರಸ್ತಾಪ ಬಂದಿಲ್ಲ: ಯು.ಟಿ.ಖಾದರ್

ಬೆಳಗಾವಿ: ಹಿಂದುತ್ವವಾದಿ ವೀರ ಸಾವರ್ಕರ್ ಅವರ ಭಾವಚಿತ್ರವನ್ನು ಸುವರ್ಣ ವಿಧಾನಸೌಧದಿಂದ ತೆಗೆಯುವ ಪ್ರಸ್ಥಾವನೆ ಬಂದಿಲ್ಲ ಎಂದು ಸ್ಪೀಕರ್‌ ಯುಟಿ ಖಾದರ್ ತಿಳಿಸಿದ್ದಾರೆ.

ಸುವರ್ಣ ವಿಧಾನಸೌಧದ ತೆರವುಗೊಳಿಸಬೇಕು ಎಂದು ಕಾಂಗ್ರೆಸ್​ನ ಹಲವು ನಾಯಕರು ಆಗ್ರಹಿಸಿದ್ದರು. ಆದರೆ ಸಾವರ್ಕರ್ ಭಾವಚಿತ್ರವನ್ನು ತೆಗೆಯುವ ಬಗ್ಗೆ ಯಾವುದೇ ಪ್ರಸ್ಥಾವನೆ ಬಂದಿಲ್ಲ. ಆದರೆ ಇದಕ್ಕೆ ಸ್ಪೀಕರ್‌ ಸ್ಪಷ್ಟನೆ ನೀಡಿದ್ದು, ಈವರೆಗೂ ಸಾವರ್ಕರ್‌ ಭಾವಚಿತ್ರವನ್ನು ಸುವರ್ಣಸೌಧದಿಂದ ತೆರವು ಮಾಡುವ ಯಾವುದೇ ಪ್ರಸ್ತಾಪ ಬಂದಿಲ್ಲ ಎಂದಿದ್ದಾರೆ.

ನನಗೆ ಎಲ್ಲಾ ಸಚಿವರೂ ಒಂದೇ, ಪ್ರತಿಪಕ್ಷದವರೂ ಒಂದೇ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವರವರ ಹೇಳಿಕೆ ನೀಡಲು ಎಲ್ಲರಿಗೂ ಅವಕಾಶವಿದೆ. ಯಾವುದೇ ವಿಚಾರವಿದ್ದರೂ ಸಂವಿಧಾನ ಬದ್ಧವಾಗಿ ಕರ್ತವ್ಯ ನಿರ್ವಹಿಸುತ್ತೇನೆ ಎಂದು ಹೇಳಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!