Mysore
20
overcast clouds

Social Media

ಮಂಗಳವಾರ, 09 ಡಿಸೆಂಬರ್ 2025
Light
Dark

ದೇವಾಲಯದ ಗಂಟೆ ಹೊಡೆದ್ರೆ ಪ್ರಯೋಜನವಿಲ್ಲ: ವಿವಾದದ ಕಿಡಿ ಎಬ್ಬಿಸಿದ ಸಚಿವ ಮಧು ಬಂಗಾರಪ್ಪ

madhu bangarappa

ಕೊಪ್ಪಳ: ಹಿಂದುತ್ವ ಹಾಗೂ ದೇವಸ್ಥಾನದ ಬಗ್ಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಆಡಿದ ಮಾತುಗಳು ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗಿದ್ದು, ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ.

ಕೊಪ್ಪಳದಲ್ಲಿಂದು ಮಾತನಾಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು, ನನ್ನ ಬಳಿ ಜನರು ದೇವಸ್ಥಾನಕ್ಕೆಂದು ದುಡ್ಡು ಕೇಳಿಕೊಂಡು ಬರ್ತಾರೆ ಅಂದ್ರೆ, ನಾನು ಯಾವ ದೇವಸ್ಥಾನಕ್ಕೂ ಹಣ ನೀಡೋದಿಲ್ಲ ಎಂದರು. ದೇವಸ್ಥಾನದಲ್ಲಿ ಗಂಟೆ ಹೊಡೆದರೆ ದೇಶದಲ್ಲಿ ಏನಾಗುತ್ತೋ ಗೊತ್ತಿಲ್ಲ ಎಂದು ಹೇಳಿದ್ದಾರೆ.

ಇನ್ನು ಮುಂದುವರಿದು ಮಾತನಾಡಿದ ಅವರು, ನಾನು ಯಾವ ದೇವಸ್ಥಾನಕ್ಕೂ ಹಣ ನೀಡುವುದಿಲ್ಲ. ದೇವಸ್ಥಾನದಲ್ಲಿ ಗಂಟೆ ಹೊಡೆಯೋದಕ್ಕಿಂತ ಶಾಲೆಯಲ್ಲಿ ಗಂಟೆಯ ಶಬ್ಧ ಕೇಳಬೇಕು. ದೇವಸ್ಥಾನದಲ್ಲಿ ಗಂಟೆ ಹೊಡೆಯೋದ್ರಿಂದ ಯಾವುದೇ ಪ್ರಯೋಜನವಿಲ್ಲ ಎನ್ನುವ ಮಾತುಗಳು ಮತ್ತೊಂದು ವಿವಾದದ ಕಿಡಿ ಎಬ್ಬಿಸಿದೆ.

ಇನ್ನು ಕೆಲವರು ಹಿಂದುತ್ವ, ಹಿಂದುತ್ವ ಎಂದು ಮಾತನಾಡುತ್ತಾರೆ. ಹಿಂದುತ್ವ ಎಂದು ಬೊಬ್ಬೆ ಬಡಿದುಕೊಳ್ಳುವವರಿಗೇನು ಗೊತ್ತು ಬದನೆಕಾಯಿ ಎಂದು ಬಿಜೆಪಿ ವಿರುದ್ಧ ಪರೋಕ್ಷವಾಗಿ ಮಧು ಬಂಗಾರಪ್ಪ ವಾಗ್ದಾಳಿ ನಡೆಸಿದ್ದಾರೆ.

ಸಚಿವರ ಈ ಮಾತು ಸೋಷಿಯಲ್‌ ಮೀಡಿಯಾಗಳಲ್ಲಿ ವೈರಲ್‌ ಆಗಿದ್ದು, ಹಿಂದೂ ಪರ ಹೋರಾಟಗಾರರಿಂದ ವಿರೋಧ ವ್ಯಕ್ತವಾಗಿದೆ.

Tags:
error: Content is protected !!