Mysore
19
scattered clouds

Social Media

ಶನಿವಾರ, 31 ಜನವರಿ 2026
Light
Dark

ಮೈಸೂರು ದಸರಾ ಟಿಕೆಟ್‌ನಲ್ಲೂ ಅವ್ಯವಹಾರ : ಸಿಎಂ,ಡಿಸಿಎಂ ಜನಸಾಮಾನ್ಯರ ಕ್ಷಮೆ ಕೇಳಲಿ ; ಅಶೋಕ್‌ ಒತ್ತಾಯ

ಬೆಂಗಳೂರು : ನಾಡಹಬ್ಬ ಮೈಸೂರು ದಸರಾ ಆಚರಣೆ ವೇಳೆ ಅವ್ಯವಸ್ಥೆಯ ಜೊತೆಗೆ ಅವ್ಯವಹಾರ ನಡೆದಿದ್ದು. ಟಿಕೆಟ್ ಪಡೆದ ಮೇಲೂ ಪ್ರವೇಶ ಸಿಗದ ಪ್ರವಾಸಿಗರು ಹಾಗೂ ಜನಸಾಮಾನ್ಯರಲ್ಲಿ ರಾಜ್ಯ ಸರ್ಕಾರ ಕೂಡಲೇ ಕ್ಷಮೆ ಕೇಳಿ ಅವರಿಂದ ಪಡೆದುಕೊಂಡಿದ್ದ ಹಣವನ್ನು ತತ್ ಕ್ಷಣವೇ ಹಿಂತಿರುಗಿಸಬೇಕು ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್ ಅಶೋಕ್ ಒತ್ತಾಯಿಸಿದ್ದಾರೆ.

ಈ ಸಬಂಧ ತಮ್ಮ ಸಾಮಾಜಿಕ ಜಾಲ ತಾಣ ಎಕ್ಸ್ ನಲ್ಲಿ ಸರ್ಕಾರದ ವಿರುದ್ದ ಪೋಸ್ಟ್ ಮಾಡಿರುವ ಅವರು, ನಾಡಹಬ್ಬ ದಸರಾ ಆಚರಣೆಯಲ್ಲೂ ಕಾಂಗ್ರೆಸ್ ಸರ್ಕಾರದ ಅವ್ಯವಸ್ಥೆ ಮತ್ತು ಅವ್ಯವಹಾರ ನಡೆಸಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಇದನ್ನು ಓದಿ : ಸಿನಿಪ್ರಿಯರಿಗೆ ಶಾಕ್:‌ ಸಿನಿಮಾ ಟಿಕೆಟ್‌ ದರ 200ರೂ ನಿಗದಿಗೆ ಹೈಕೋರ್ಟ್‌ ತಡೆಯಾಜ್ಞೆ

ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿ ವೀಕ್ಷಣೆಗೆ ಸಾವಿರಾರು ರೂಪಾಯಿ ಕೊಟ್ಟು ಗೋಲ್ಡ್ ಕಾರ್ಡ್, ವಿಐಪಿ ಟಿಕೆಟ್ ಪಡೆದಿದ್ದರೂ ಒಳಗೆ ಪ್ರವೇಶ ಸಿಗದೇ ಪ್ರವಾಸಿಗರು ಪರದಾಡಿರುವ ಘಟನೆ, ಕಾಂಗ್ರೆಸ್ ಸರ್ಕಾರ ನಾಡಹಬ್ಬ ದಸರಾ ಆಚರಣೆಯ ಬಗ್ಗೆ ಎಷ್ಟು ನಿರ್ಲಕ್ಷ್ಯ, ಅಸಡ್ಡೆ ತೋರಿದೆ ಎನ್ನುವುದಕ್ಕೆ ಮತ್ತೊಂದು ಸಾಕ್ಷಿ ಎಂದು ವಾಗ್ದಳಿ ನಡೆಸಿದ್ದಾರೆ.

ಪ್ರವೇಶ ನೀಡಲು ಸಾಧ್ಯವಾಗದ ಮೇಲೆ 6,500 ಪಡೆದು ಗೋಲ್ಡ್ ಕಾರ್ಡ್ ಯಾಕೆ ವಿತರಿಸಬೇಕಿತ್ತು? ಲಭ್ಯವಿರುವ ಸ್ಥಳಾವಕಾಶಕ್ಕಿಂತ ಹೆಚ್ಚು ಗೋಲ್ಡ್ ಕಾರ್ಡ್ ಮಾರಾಟ ಮಾಡುವ ನಿರ್ಧಾರ ಯಾರದ್ದು? ಇದರ ಯೋಜನೆ, ನಿರ್ವಹಣೆಯ ಜವಾಬ್ದಾರಿ ಯಾರದ್ದು?.ಈ ಎಲ್ಲ ಪ್ರಶ್ನೆಗಳಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಅವರು ಉತ್ತರಿಸಬೇಕು ಎಂದು ಅಶೋಕ್ ಆಗ್ರಹಿಸಿದ್ದಾರೆ.

Tags:
error: Content is protected !!