ಕೇರಳ: ರಾಜ್ಯದ ಐತಿಹಾಸಿಕ ಶ್ರೀ ಪದ್ಮನಾಭಸ್ವಾಮಿ ದೇವಾಲಯದಲ್ಲಿ ಇದೇ ನವೆಂಬರ್.20ರಿಂದ ಮುರಜಪಂ ಲಕ್ಷದೀಪೋತ್ಸವ ಪ್ರಾರಂಭವಾಗಲಿದೆ.
56 ದಿನಗಳ ಕಾಲ ಮುರಜಪಂ ಆಚರಣೆ ಮಾಡಲಾಗುತ್ತದೆ ಎಂದು ದೇಗುಲದ ಅಧಿಕಾರಿಗಳು ತಿಳಿಸಿದ್ದಾರೆ. ಇದು ಆರು ವರ್ಷಗಳಿಗೊಮ್ಮೆ ನಡೆಯುವ ಆಚರಣೆಯಾಗಿದ್ದು, ಜನವರಿ.14ರ ಮಕರ ಸಂಕ್ರಾಂತಿಯಂದು ಲಕ್ಷ ದೀಪೋತ್ಸವದೊಂದಿಗೆ ಆಚರಣೆ ಮುಕ್ತಾಯಗೊಳ್ಳಲಿದೆ.
ದೇಗುಲದ ಕೊಳದಲ್ಲಿ 48 ದಿನಗಳ ಕಾಲ ಬೆಳಿಗ್ಗೆ 6 ರಿಂದ 7ರವರೆಗೆ ಜಲದೀಪವನ್ನೂ ಕೂಡ ಹಚ್ಚಲಾಗುತ್ತದೆ. ದೇವಾಲಯದಲ್ಲಿ 1 ಲಕ್ಷ ಎಣ್ಣೆ ದೀಪಗಳನ್ನು ಹಚ್ಚುವುದು ಆಚರಣೆಯ ವಿಶೇಷವಾಗಿದೆ.





