ಬೆಂಗಳೂರು: ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಮನೆಯಲ್ಲಿ 3 ಲಕ್ಷ ನಗದು ಕಳ್ಳತನವಾಗಿದ್ದು, ದೂರು ದಾಖಲಾಗಿದೆ.
ನಟ ದರ್ಶನ್ ಮ್ಯಾನೇಜರ್ ನಾಗರಾಜ್ ಅವರು ಚೆನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಗೆ ದೂರು ನೀಡಿದ್ದಾರೆ. ದುಷ್ಕರ್ಮಿಗಳು 3 ಲಕ್ಷ ನಗದು ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದಾರೆ.
ಇದನ್ನು ಓದಿ; ದಯವಿಟ್ಟು ನನಗೆ ವಿಷ ಕೊಡಿ: ಕೋರ್ಟ್‌ಗೆ ನಟ ದರ್ಶನ್ ಮನವಿ
ವಿಜಯಲಕ್ಷೀ ವಾಸ ಇರುವ ಹೊಸಕೆರೆಹಳ್ಳಿ ಪ್ರೆಸ್ಟೀಜ್ ಅಪಾರ್ಟ್‌ಮೆಂಟ್ ಫ್ಲಾರ್ಟ್‌ನಲ್ಲಿ ಕಳ್ಳತನ ನಡೆದಿದೆ. 3 ಲಕ್ಷ ರೂಪಾಯಿ ಹಣ ಕಳ್ಳತನವಾಗಿರುವುದರಿಂದ ಠಾಣೆಗೆ ದೂರು ನೀಡಿದ್ದಾರೆ.
ದೂರು ನೀಡಿದ ಹಿನ್ನೆಲೆಯಲ್ಲಿ ಕೆರೆ ಅಚ್ಚುಕಟ್ಟು ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಮನೆ ಕೆಲಸದವರ ಮೇಲೆ ಅನುಮಾನ ವ್ಯಕ್ತಪಡಿಸಿದ ಮ್ಯಾನೇಜರ್ ನಾಗರಾಜ್ ಪೊಲೀಸರಿಗೆ ದೂರು ನೀಡಿದ್ದಾರೆ.





