Mysore
22
overcast clouds
Light
Dark

ʻಕೈʼ ಖಾಲಿ ಚೊಂಬನ್ನು ಅಕ್ಷಯ ಪಾತ್ರೆ ಮಾಡಿದ್ದು ಪ್ರಧಾನಿ: ಎಚ್‌.ಡಿ ದೇವೇಗೌಡ

ಚಿಕ್ಕಬಳ್ಳಾಪುರ: ಕಾಂಗ್ರೆಸ್‌ ರಾಷ್ಟ್ರದಲ್ಲಿ 10 ವರ್ಷ ಆಡಳಿತ ನಡೆಸಿ ದೇಶದ ಖಾಜಾನೆಯನ್ನು ಖಾಲಿ ಮಾಡಿ 2014 ರಲ್ಲಿ ಮೋದಿ ಕೈಗೆ ಖಾಲಿ ಚೊಂಬು ನೀಡಿತ್ತು. ಆ ಖಾಲಿ ಚೊಂಬನ್ನು ಪ್ರಧಾನಿ ಅಕ್ಷಯ ಪಾತ್ರೆಯನ್ನಾಗಿಸಿದ್ದಾರೆ ಎಂದು ಮೋದಿಯ ಆಡಳಿತ ವೈಖರಿಯನ್ನು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಶ್ಲಾಘಿಸಿದ್ದಾರೆ.

ತಾಲೂಕಿನ ಚೊಕ್ಕಹಳ್ಳಿ ಬಳಿ ಶನಿವಾರ ನಡೆದ ವಿಜಯ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ದೇವಗೌಡರು, ಕೇಂದ್ರದಿಂದ ರಾಜ್ಯಕ್ಕೆ ಸಿಕ್ಕಿತ್ತು ಚೊಂಬು ಎಂದು ಕಾಂಗ್ರೆಸ್ ಜಾಹಿರಾತು ನೀಡಿದೆ. ಆದರೆ ಯುಪಿಎ ನೇತೃತ್ವದ ಕಾಂಗ್ರೆಸ್‌ 2014 ರಲ್ಲಿ ಮೋದಿಗೆ ಕೈಗೆ ಇದೇ ಖಾಲಿ ಚೊಂಬು ನೀಡಿತ್ತು ಎಂದರು.

ಈ ಹತ್ತು ವರ್ಷದಲ್ಲಿ ಆ ಖಾಲಿ ಚೊಂಬನ್ನು ಮೋದಿ ಅಕ್ಷಯ ಪಾತ್ರೆ ಮಾಡಿ ಬಡವರು, ಪರಿಶಿಷ್ಟ ಜಾತಿ, ಹಿಂದುಳಿದವರು, ಸಣ್ಣ ಸಮಾಜದವರನ್ನು ಮೇಲೆತ್ತಿದ್ದರು. ಇಂತವರ ಬಗ್ಗೆ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್‌ ಮಾತನಾಡುತ್ತಿದ್ದಾರೆ. ಇವರಿಗೆ ನಾಚಿಕೆ ಆಗಬೇಕು. ಇದು ಕ್ಷುಲ್ಲಕ ರಾಜಕಾರಣ ಎಂದು ಟೀಕೀಸಿದರು.