ಕಲಬುರ್ಗಿ: ಎಂಎಲ್‌ಸಿ ರವಿಕುಮಾರ್ ಬುದ್ಧಿ ಸರಿಯಿಲ್ಲ, ಹಾಗಾಗಿ ಅವರು ನಿಮ್ಹಾನ್ಸ್‌ನಲ್ಲಿ ಇರಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಕಲಬುರ್ಗಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ ಅವರು, ರವಿಕುಮಾರ್ ಮೂಲತಃ ಬಿಜೆಪಿಯವರಲ್ಲ, ಆರ್‌ಎಸ್‌ಎಸ್‌ನಿಂದ ಬಂದವರು. ಮನುಸ್ಮೃತಿ ಹಿನ್ನೆಲೆಯಿಂದ ಬಂದಿದವರಾಗಿದ್ದಾರೆ. ಮನುಸ್ಮೃತಿಯಲ್ಲಿ ಮಹಿಳೆಯರ ಬಗ್ಗೆ ಏನು ಹೇಳಲಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಬಿಜೆಪಿ ನಾಯಕರು ಸಂಸ್ಕೃತಿ ಬಗ್ಗೆ ಹೇಳುತ್ತಾರೆ. ಆದರೆ ಅವರ ಪಕ್ಷದ ನಾಯಕರಿಗೆ ಯಾವುದೂ ಅನ್ವಯವಾಗುತ್ತಿಲ್ಲ ಎಂದು ಕಿಡಿಕಾರಿದರು.
ರವಿಕುಮಾರ್ ಆಡಿದ ಮಾತುಗಳು ವಿಡಿಯೋದಲ್ಲಿಯೇ ರೆಕಾರ್ಡ್ ಆಗಿದೆ. ಇದಕ್ಕಿಂತ ಸಾಕ್ಷಿಯೇನು ಬೇಕು? ಇದು ಅವರ ಮನಃಸ್ಥಿತಿ ತೋರಿಸುತ್ತಿದೆ. ಕೊಳಕು ಮನಸ್ಸು, ಅವರ ಕೊಳಕು ಬುದ್ಧಿ, ಕೊಳಕು ನಾಲಿಗೆ ಇದನ್ನೆಲ್ಲಾ ಹೇಳಿಸುತ್ತಿದೆ. ಅಂದರೆ ಅವರ ಬುದ್ಧಿ ಸರಿಯಿಲ್ಲ ಎಂದರ್ಥ. ಹಾಗಾಗಿ ಅವರು ನಿಮ್ಹಾನ್ಸ್‌ಗೆ ಹೋಗಬೇಕು. ಮಹಿಳೆಯರಿಗೆ ಗೌರವ ಕೊಡಬೇಕು ಎಂಬುದು ಗೊತ್ತಿಲ್ಲ. ಮಾತಿನ ಮೇಲೆ ಹಿಡಿತವಿಲ್ಲ ಎಂದ ಮೇಲೆ ಅವರು ಹುಚ್ಛಾಸ್ಪತ್ರೆಯಲ್ಲಿರುವುದೇ ಸೂಕ್ತ ಎಂದು ಕಿಡಿಕಾರಿದರು.





