Mysore
23
broken clouds

Social Media

ಶನಿವಾರ, 19 ಏಪ್ರಿಲ 2025
Light
Dark

ರನ್ಯಾರಾವ್‌ ಪ್ರಕರಣದಲ್ಲಿ ಸಚಿವರ ನಂಟು| ಆ ಸಚಿವರ ಬಗ್ಗೆ ಗೊತ್ತಿದೆ, ಅಧಿವೇಶನದಲ್ಲಿ ಬಹಿರಂಗ ಪಡಿಸಲಾಗುವುದು: ಯತ್ನಾಳ್‌

ವಿಜಯಪುರ: ರನ್ಯಾರಾವ್‌ ಗೋಲ್ಡ್‌ ಸ್ಮಗ್ಲಿಂಗ್‌ ಕೇಸ್‌ನಲ್ಲಿ ನಂಟು ಹೊಂದಿರುವ ಸಚಿವರ ಬಗ್ಗೆ ನಮಗೆ ಗೊತ್ತಿದೆ. ಆ ಸಚಿವರ ಹೆಸರನ್ನು ಅಧಿವೇಶನದಲ್ಲ ಬಹಿರಂಗಪಡಿಸಲಾಗುವುದು ಎಂದು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರು ಸ್ಫೋಟಕ ಹೇಳಿಕೆ ನೀಡಿದ್ದಾರೆ.

ವಿಜಯಪುರದಲ್ಲಿ ಇಂದು(ಮಾರ್ಚ್.‌16) ರನ್ಯಾರಾವ್‌ ಗೋಲ್ಡ್‌ ಸ್ಮಗ್ಲಿಂಗ್‌ ವಿಚಾರ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ರನ್ಯಾ ಕೇಸ್‌ನಲ್ಲಿ ನಂಟು ಹೊಂದಿರೋ ಸಚಿವರು ಯಾರು ಎಂಬುದು ನಮಗೆ ತಿಳಿದಿದೆ. ಅವರೇ ಆರೋಪಿ ರನ್ಯಾಗೆ ಪ್ರೋಟೋಕಾಲ್‌ ನೀಡಿದವರ ಮಾಹಿತಿ ಸಂಗ್ರಹ ಮಾಡಿದ್ದಾರೆ. ಆ ಸಚಿವರಿಗೆ ಮಾತ್ರ ಗೋಲ್ಡ್‌ ಎಲ್ಲಿಂದ ತಂದರು? ಅದನ್ನು ರನ್ಯಾ ಎಲ್ಲಿಟ್ಟುಕೊಂಡು ಬಂದರು ಎಂಬುದು ಸೇರಿದಂತೆ ಉಳಿದೆಲ್ಲಾ ಮಾಹಿತಿಗಳು ಗೊತ್ತಿದೆ ಎಂದು ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ರನ್ಯಾ ಕೇಸ್‌ನಲ್ಲಿ ಕೇಂದ್ರದವರ ತಪ್ಪದೆ ಎಂಬ ಸಚಿವ ಲಾಡ್‌ ಆರೋಪದ ಬಗ್ಗೆ ಮಾತನಾಡಿದ ಅವರು, ಕೇಸ್‌ನಲ್ಲಿ ಯಾರೇ ತಪ್ಪು ಮಾಡಿದ್ದರೂ ಅದೇ ತಪ್ಪೇ ಆಗಿರುತ್ತದೆ. ನಾವು ಬಿಜೆಪಿಯನ್ನು ಸಮರ್ಥನೆ ಮಾಡಿಕೊಳ್ಳುತ್ತಿಲ್ಲ. ಆದರೆ ಕೇಂದ್ರದ ಅಧಿಕಾರಿಗಳ ತಪ್ಪಿದ್ದರೆ ಅದು ಕೂಡ ತಪ್ಪಾಗುತ್ತದೆ. ನಮ್ಮ ಕೇಂದ್ರ ಸಚಿವರು ಮಾತ್ರ ಈ ಪ್ರಕರಣದಲ್ಲಿ ಭಾಗಿಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.

Tags: