ಬೆಳಗಾವಿ: ಬಿಜೆಪಿ ಪಕ್ಷದಿಂದ ಉಚ್ಛಾಟನೆಗೊಂಡ ನಾನು ಬೇರೊಂದು ಪಕ್ಷ ಕಟ್ಟಿದರೆ ಕಾಂಗ್ರೆಸ್‌ಗೆ ಅನುಕೂಲಾಗುತ್ತದೆ. ಹಾಗಾಗಿ ಪಕ್ಷ ಕಟ್ಟುವ ಬಗ್ಗೆ ಚಿಂತನೆ ಮಾಡಲಾಗುತ್ತಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ.
ಜಿಲ್ಲೆಯ ಬೈಲಹೊಂಗಲದಲ್ಲಿ ಇಂದು(ಏಪ್ರಿಲ್.7) ಈ ಕುರಿತು ಮಾತನಾಡಿದ ಅವರು, ಬಿಜೆಪಿ ಪಕ್ಷದಲ್ಲಿ ಬಿ.ಎಸ್.ಯಡಿಯೂರಪ್ಪ ಫೋಟೋ ಹಾಕಿದರೆ ವೋಟ್ ಹಾಕುವ ಕಾಲ ಮುಗಿಯಿತು. ಹೀಗಿರುವವಾಗ ಬಿಜೆಪಿಯಿಂದ ಆರು ವರ್ಷಗಳ ಕಾಲ ಉಚ್ಛಾಟನೆಗೊಂಡಿದ್ದೇನೆಂಬ ಕಾರಣಕ್ಕೆ ನಾನು ಬೇರೊಂದು ಪಕ್ಷ ಕಟ್ಟಿದ್ದರೆ ಕಾಂಗ್ರೆಸ್‌ಗೆ ಅನುಕೂಲವಾಗುತ್ತದೆ. ಹೀಗಾಗಿ ಈ ಬಗ್ಗೆ ಚಿಂತನೆ ಮಾಡುತ್ತಿದ್ದೇವೆ ಎಂದು ಹೇಳಿದರು.
ಬೇರೆ ಪಕ್ಷ ಕಟ್ಟಲು ಬಹಳಷ್ಟು ಜನರು ಆರ್ಥಿಕವಾಗಿ ಬೆಂಬಲ ನೀಡುತ್ತೇವೆ ಎಂದಿದ್ದು, ಇಡೀ ರಾಜ್ಯದ ಎಲ್ಲಾ ಕಡೆಯಿಂದ ಬೆಂಬಲ ಸಿಗುತ್ತಿದೆ. ಆದರೆ ನಾನು ಪಕ್ಷ ಕಟ್ಟಿದ ಮೇಲೆ ಕಾಂಗ್ರೆಸ್‌ನಿಂದ ಹಣ ಪಡೆದು ಕಟ್ಟಿದ್ದಾನೆಂದು ಹೇಳುತ್ತಾರೆ. ಅದಕ್ಕೆ ಸದ್ಯಕ್ಕೆ ಯೋಚನೆ ಮಾಡುತ್ತಿದ್ದೇನೆ ಎಂದರು.
ಛಲವಾದಿ ನಾರಾಯಣಸ್ವಾಮಿ ಬಿಜೆಪಿ ಪಕ್ಷ ಕಟ್ಟಿದ್ದಾರಾ? ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಕಟ್ಟಿದ್ದು ನಾವು. ಆದರೆ ಈಗ ನಾವು ವಿಜಯೇಂದ್ರ ಭಾಷಣ ಕೇಳಬೇಕು ಎಂತಹ ದುರ್ದೈವ. ಇನ್ನೂ ಮುಂದಿನ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಸಿಗದಿದ್ದರೇ ಯಾರು ಯಾರು ಬೇರೆ ಪಕ್ಷಕ್ಕೆ ಹೋಗ್ತಾರೆ ಗೊತ್ತಿಲ್ಲ. ಅವರ ಸಾಲಿನಲ್ಲಿ ಪ್ರೀತಂ ಜೆ.ಗೌಡ ಇದ್ದಾರೆ. ಅವರು ಯಾವಾಗ ಕಾಂಗ್ರೆಸ್‌ಗೆ ಹೋಗುತ್ತಾರೋ ಗೊತ್ತಿಲ್ಲ. ಆದರೆ ಹೈಕಮಾಂಡ್ ಮಾತಿಗೆ ತಲೆಬಾಗಿದ್ದೇವೆಂದು ಹೇಳೋದು ಕಾಮನ್ ಡೈಲಾಗ್ ಎಂದು ಹೇಳಿದರು.





