Mysore
29
scattered clouds

Social Media

ಮಂಗಳವಾರ, 03 ಫೆಬ್ರವರಿ 2026
Light
Dark

ಈ ರಾಜ್ಯದ ಸಿಎಂ ಆದರೆ ಸಾವಿರ ಬುಲ್ಡೋಜರ್‌ ಖರೀದಿ ಮಾಡುತ್ತೇನೆ: ಯತ್ನಾಳ್‌

ಬಾಗಲಕೋಟೆ: ನಾನು ಈ ರಾಜ್ಯದ ಸಿಎಂ ಆದರೆ ಒಂದು ಸಾವಿರ ಬುಲ್ಡೋಜ್‌ ಖರೀದಿ ಮಾಡುತ್ತೇನೆ ಎಂದು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ತಿಳಿಸಿದ್ದಾರೆ.

ಬಾಗಲಕೋಟೆಯಲ್ಲಿ ಇಂದು(ಮಾರ್ಚ್‌.24) ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಹಿಂದೂಗಳ ಮೇಲೆ ಹಲ್ಲೆ ನಡೆಸಿದಾಗ ಕಾಂಗ್ರೆಸ್‌ ಸರ್ಕಾರವೂ ಏನೂ ಮಾಡಲಿಲ್ಲ. ಅಲ್ಲದೇ ನಮ್ಮ ಸರ್ಕಾರವೂ ಇದ್ದಾಗಲೂ ಏನೂ ಮಾಡಿಲ್ಲ. ಹೀಗಾಗಿ ರಾಜ್ಯದಲ್ಲಿ ಹಿಂದೂಗಳ ಮೇಲಿನ ದಬ್ಬಾಳಿಕೆ ನಿಲ್ಲಬೇಕೆಂದರೆ ಬುಲ್ಡೋಜರ್‌ ತರಬೇಕು ಎಂದರು.

ಈ ರಾಜ್ಯದ ಮುಖ್ಯಮಂತ್ರಿ ಆದರೆ ನಾನು 1,000 ಬುಲ್ಡೋಜರ್‌ ಖರೀದಿ ಮಾಡುತ್ತೇನೆ. ಒಂದು ತಾಲ್ಲೂಕಿನಲ್ಲಿ 25 ಜೆಸಿಬಿ ಆರ್ಡರ್‌ ಮಾಡುತ್ತೇನೆ. ಯಾರಾದರೂ ಬಾಯಿಬಿಟ್ರೆ ಅವರ ಮನೆಯನ್ನು ಖಲಾಸ್‌ ಮಾಡುತ್ತೇನೆ ಎಂದು ಹೇಳಿದರು.

Tags:
error: Content is protected !!