Mysore
21
overcast clouds

Social Media

ಭಾನುವಾರ, 16 ಆಗಸ್ಟ್ 2026
Light
Dark

ನಿಜವಾದ ಚೆಂಗ್ಲು ಡಿ.ಕೆ.ಶಿವಕುಮಾರ್: ಬಿಜೆಪಿ ಶಾಸಕ ಮುನಿರತ್ನ (Munirathna)

munirathna dk shivakumar bjp

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಎರಡು ವರ್ಷವಾಗುತ್ತಾ ಬಂದಿದ್ದು, ಉಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿರುವ ಬೆಂಗಳೂರು ನಗಾರಭಿವೃದ್ದಿ ಸಚಿವ ಡಿ.ಕೆ ಶಿವಕುಮಾರ್ ತಮ್ಮ ಅವಧಿಯಲ್ಲಿ ಒಂದೇ ಒಂದು ಅಭಿವೃದ್ದಿ ಕಾಮಗಾರಿಗೆ ಗುದ್ದಲಿ ಪೂಜೆ ಮಾಡಿದ್ದರೆ ತೋರಿಸಲಿ ಎಂದು ಬಿಜೆಪಿ ಶಾಸಕ ಮುನಿರತ್ನ ಅವರು ಬಹಿರಂಗ ಸವಾಲು ಹಾಕಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಡಿಸಿಎಂ ಆಗಿ ಎರಡು ವರ್ಷ ಆಯಿತು. ಅವರ ಎರಡು ವರ್ಷದ ಸಾಧನೆ ಏನು ಎಂದು ಹೇಳಲಿ. ಸಾರ್ವಜನಿಕ ಚರ್ಚೆಗೆ ನಾನು ಕೂಡಾ ಸಿದ್ದನಿದ್ದೇನೆ. ಒಂದೇ ವೇದಿಕೆ ಸಿದ್ದಪಡಿಸಲಿ ಎಂದು ನೇರ ಸವಾಲು ಎಸೆದರು.

ಇದನ್ನೂ ಓದಿ:- ಡಿಸಿಎಂ ಡಿಕೆಶಿ ಭೇಟಿ ಮಾಡಿದ ಸಂಸದ ಬಿ.ವೈ.ರಾಘವೇಂದ್ರ

ಇನ್ನು ಅವನ್ಯಾವನೋ ಚಂಗಲು ಒಬ್ಬ ರಾಜ್ಯಪಾಲರಿಗೆ ದೂರು ಕೊಟ್ಟಿದ್ದಾನೆ ಎಂದು ನನ್ನ ವಿರುದ್ದ ಡಿ.ಕೆ.ಶಿವಕುಮಾರ್ ಮಾತಾಡಿದ್ದಾರೆ. ನಮ್ಮ ದೇಶದಲ್ಲಿ ದೂರು ನೀಡಲು ಪ್ರತಿಯೊಬ್ಬರಿಗೂ ಹಕ್ಕಿದೆ. ನಾನು ಎರಡು ಸಾವಿರ ಕೋಟಿ ಹಗರಣದ ಬಗ್ಗೆ ದೂರು ಕೊಟ್ಟಿದ್ದೇನೆ. ಈ ದೂರಿಗೆ ಈಗಲೂ ನಾನು ಬದ್ಧ. ಈ ದೂರು ಸರಿಯಲ್ಲ ಎಂದು ಬೇಕಾದರೆ ಹೇಳಲಿ. ದಾಖಲೆಯೂ ಸರಿ ಇಲ್ಲ ಎಂದು ಹೇಳಲು ನನ್ನದೇನು ತಕರರು ಇಲ್ಲ. ಅದನ್ನು ಬಿಟ್ಟು ಚಂಗಲು ಎನ್ನುವ ಪದಬಳಕೆ ಸರಿ ಇಲ್ಲ. ಆದರೆ ನಿಜವಾದ ಚಂಗ್ಲು ಡಿಕೆಶಿ ಎಂದು ತಿರುಗೇಟು ನೀಡಿದರು.

ಇದನ್ನೂ ಓದಿ:- ಜಾತಿಗಣತಿ ವಿಚಾರ ಕುರಿತು ಸರ್ವ ಪಕ್ಷ ಸಭೆ ಕರೆಯಬೇಕು: ನಿಖಿಲ್‌ ಕುಮಾರಸ್ವಾಮಿ

ಇನ್ನು ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು, ಕಾಂಗ್ರೆಸ್‌ನಲ್ಲಿದ್ದರೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ಮಾಡುತ್ತಾರೆ. ಅವರ ಒತೆ ಧ್ಯಾನಕ್ಕೆ ಕೂರುವುದು. ಪ್ರಯಾಗ್ ರಾಜ್‌ನಲ್ಲಿ ಮುಳುಗುವುದು. ಪ್ರಧಾನಿ ನರೇಂದ್ರ ಮೋದಿ ಭೇಟಿಯನ್ನು ಡಿಕೆಶಿ ಥಟ್ ಥಟ್ಟನೆ ಮಾಡಿದ್ದಾರೆ. ಇದೆಲ್ಲ ಥಟ್ ಥಟ್ಟನೆ ಆದ ಬದಲಾವಣೆ ಎಂದು ಡಿಕೆಶಿ ವಿರುದ್ಧ ಮುನಿರತ್ನ ವಾಗ್ದಾಳಿ ನಡೆಸಿದರು.

Tags:
error: Content is protected !!