ಬೆಂಗಳೂರು: ಅಧಿಕಾರ ಯಾರಿಗೂ ಶಾಶ್ವತ ಅಲ್ಲ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಬ್ರೇಕ್ ಫಾಸ್ಟ್ ಮೀಟಿಂಗ್ ಬಳಿಕ ಅಧಿಕಾರ ಹಂಚಿಕೆ, ಕುರ್ಚಿ ಕಿತ್ತಾಟದ ವಿಚಾರಕ್ಕೆ ಬ್ರೇಕ್ ಬಿದ್ದಿದೆ.
ಇದನ್ನು ಓದಿ: ರಾಜ್ಯದಲ್ಲಿ ನುಗ್ಗೇಕಾಯಿಗೆ ಬಂಪರ್ ಬೆಲೆ: ಗ್ರಾಹಕರ ಜೇಬಿಗೆ ಕತ್ತರಿ
ಈ ಕುರಿತು ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ ಅವರು, ಅಧಿಕಾರ ಅನ್ನೋದು ಯಾರಿಗೂ ಶಾಶ್ವತವಲ್ಲ. 30 ತಿಂಗಳ ನಂತರವಾದರೂ ಅಧಿಕಾರ ಬಿಡಬಹುದು. ಅದಕ್ಕೂ ಮೊದಲೇ ಸಿಎಂ ಅಧಿಕಾರ ಬಿಡಬಹುದು. ಒಟ್ಟಾರೆಯಾಗಿ ಯಾವಾಗಲಾದರೂ ಅಧಿಕಾರ ಬಿಡಬಹುದು. ಹೈಕಮಾಂಡ್ ಬಿಡಲೇಬೇಕು ಅಂದರೆ ಬಿಡಬೇಕಾಗುತ್ತದೆ. ಎಲ್ಲವೂ ಹೈಕಮಾಂಡ್ ನಿರ್ಧಾರ ಎಂದು ಹೇಳಿದರು.





