ಬೆಂಗಳೂರು: ಪ್ರಧಾನಿ ಮೋದಿ ಅವರು ಕಳೆದ 11 ವರ್ಷಗಳಿಂದ ಸುದ್ದಿಗೋಷ್ಠಿಯನ್ನೇ ನಡೆಸಿಲ್ಲ. ಹೀಗಿರುವಾಗ ದೇಶದ ಪ್ರಗತಿ ಕುರಿತು ಚರ್ಚೆಗೆ ಬರುತ್ತಾರೆಯೇ.? ಎಂದು ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.
ಈ ಕುರಿತು ಮಾತನಾಡಿದ ಅವರು, ನಾನು ಎಂದಿಗೂ ಯಾರನ್ನೂ ವೈಯಕ್ತಿಕವಾಗಿ ಟಾರ್ಗೆಟ್ ಮಾಡಿ ಮಾತನಾಡಿಲ್ಲ. ಯಾರನ್ನೂ ಕೂಡ ನಿಂದನೆ ಮಾಡಿಲ್ಲ ಎಂದರು.
ನಾನು ಯಾವ ಸಂದರ್ಭ ಬಂದರೂ ದಾಖಲೆ ಮುಂದಿಟ್ಟುಕೊಂಡು ಮಾತನಾಡಿದ್ದೇನೆ. ಗಾಳಿಯಲ್ಲಿ ಗುಂಡು ಹಾರಿಸಿಲ್ಲ. ಆದರೆ ನಾನು ನೇರವಾಗಿ ಮಾತನಾಡುವ ಕಾರಣಕ್ಕೆ ಬಿಜೆಪಿಯವರಿಗೆ ತುಂಬಾ ತೊಂದರೆಯಾಗುತ್ತಿದೆ. ಏಕೆಂದರೆ ಅವರು ಕಾಂಗ್ರೆಸ್ ನಾಯಕರ ವಿರುದ್ಧ ವೈಯಕ್ತಿಕ ನಿಂದನೆ ಮಾಡಿದ್ದೇವೆ ಎಂದು ಆರ್‌ಎಸ್‌ಎಸ್‌ನವರಿಗೆ ರಿಪೋರ್ಟ್ ಕಾರ್ಡ್ ಕೊಡಬೇಕಿರುತ್ತದೆ. ಅವರು ದಾಖಲೆ ಇಟ್ಟುಕೊಂಡು ಎಂದಿಗೂ ಮಾತನಾಡಿಲ್ಲ. ನನ್ನ ದಾಖಲೆಗಳನ್ನು ತಿರಸ್ಕರಿಸಿಯೂ ಇಲ್ಲ ಎಂದು ಕಿಡಿಕಾರಿದರು.
ಇನ್ನು ಪ್ರಧಾನಿ ಮೋದಿ ಅವರು 11 ವರ್ಷಗಳಲ್ಲಿ ಒಂದೂ ಸುದ್ದಿಗೋಷ್ಠಿಯನ್ನು ನಡೆಸಿಲ್ಲ. ಇನ್ನು ದೇಶದ ಪ್ರಗತಿ ಕುರಿತು ಚರ್ಚೆಗೆ ಬರುತ್ತಾರೆಯೇ? ಮನ್ ಕಿ ಬಾತ್, ಸಂಸತ್ ಅಥವಾ ಕೆಂಪುಕೋಟೆ ಭಾಷಣದ ಹೊರತಾಗಿ ಯಾವುದರಲ್ಲಿ ಭಾಗವಹಿಸಿದ್ದಾರೆ ಎಂದು ಪ್ರಶ್ನೆ ಮಾಡಿದರು.





