ಬೆಂಗಳೂರು : ಜೈಲಿನಲ್ಲಿರುವ ದರ್ಶನ್ ಗೆ ಯಾವ ಬಿರಿಯಾನಿ ನೀಡ್ತಿಲ್ಲ. ಅದನ್ನ ಅವತ್ತೆ ಸ್ಪಷ್ಟಪಡಿಸಿದ್ದೇನೆ. ಅಗತ್ಯವಿದ್ರೆ ನನ್ನ ಜೊತೆ ಬನ್ನಿ ಕರೆದುಕೊಂಡು ಹೋಗಿ ತೋರಿಸುತ್ತೇನೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿದ್ದಾರೆ.
ಜೈಲು ಸೇರಿರುವ ನಟ ದರ್ಶನ್ ಗೆ ವಿಶೇಷ ಸತ್ಕಾರ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಗೃಹಸಚಿವರು, ದರ್ಶನ್ ಗೆ ಯಾವುದೇ ರೀತಿಯ ವಿಶೇಷವಾದ ಸತ್ಕಾರ ಕೊಡುತ್ತಿಲ್ಲ.ಜೈಲಿನ ಒಳಗೂ ಬಿರಿಯಾನಿ ಕೊಡುತ್ತಿಲ್ಲ ಈ ಬಗ್ಗೆ ಅಂದೇ ಸ್ಪಷ್ಟನೆ ಕೊಟ್ಟಿದ್ದೇನೆ. ಬೇಕಾದರೆ ಬನ್ನಿ ಕರೆದುಕೊಂಡು ಹೋಗಿ ತೋರಿಸುತ್ತೇನೆ ಎಂದು ಆರೋಪ ನಿರಾಕರಿಸಿದರು.





