ಬೆಂಗಳೂರು: ಮಿನರಲ್ ವಾಟರ್ ಬಾಟಲ್‌ಗಳಲ್ಲಿಯೂ ಬ್ಯಾಕ್ಟೀರಿಯಾ ಪತ್ತೆಯಾಗಿದ್ದು, ಜನತೆಯಲ್ಲಿ ಆತಂಕ ಮನೆಮಾಡಿದೆ.
ಈ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಮಾಹಿತಿ ನೀಡಿದ್ದು, ಅಸುರಕ್ಷಿತ ಹಾಗೂ ಕಳಪೆ ಗುಣಮಟ್ಟದ ಬಾಟಲ್ ಕುಡಿಯುವ ನೀರು ಪೂರೈಸುವ ಕಂಪನಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
296 ಮಾದರಿಗಳ ವಾಟರ್ ಬಾಟಲ್‌ಗಳ ತಪಾಸಣೆ ನಡೆಸಲಾಗಿದ್ದು, ಅದರಲ್ಲಿ 72 ಮಾದರಿಗಳು ಸುರಕ್ಷಿತ, 95 ಅಸುರಕ್ಷಿತ, 88 ಕಳಪೆ ಗುಣಮಟ್ಟದ ಬಾಟೆಲ್‌ಗಳು ಎಂದು ಗುರುತಿಸಲಾಗಿದೆ.
ಇದು ತುಂಬಾ ಗಂಭೀರವಾದ ವಿಚಾರವಾಗಿದೆ. ಆದ್ದರಿಂದ ನಾವು ಎಲ್ಲಾ ಬಾಟಲಿಗಳನ್ನು ಪರೀಕ್ಷೆ ಮಾಡಲು ತೀರ್ಮಾನ ಮಾಡಿದ್ದೇವೆ. ಅಸುರಕ್ಷಿತ ನೀರಿನ ಬಾಟಲಿಗಳನ್ನು ಪೂರೈಸುವ ಎಲ್ಲಾ ಕಂಪನಿಗಳ ವಿರುದ್ಧ ಪ್ರಕರಣ ದಾಖಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.