Mysore
27
light rain

Social Media

ಭಾನುವಾರ, 20 ಏಪ್ರಿಲ 2025
Light
Dark

ಶವದ ಜೊತೆ ನಾಲ್ಕು ದಿನ ಕಳೆದ ಬುದ್ಧಿಮಾಂದ್ಯ ಪುತ್ರಿ, ಕುಂದಾಪುರದಲ್ಲಿ ಮನಕಲಕುವ ಘಟನೆ

ಉಡುಪಿ: ಮದುಮೇಹ ರಕ್ತದೊತ್ತಡದಿಂದ ಬಳಲುತ್ತಿದ್ದ ತಾಯಿ ಮೃತಪಟ್ಟಿದ್ದಾರೆ. ಇದನ್ನ ಅರಿಯದ ಬುದ್ಧಿಮಾಂದ್ಯ ಪುತ್ರಿ, ಜನ್ಮದಾತೆಯ ಶವದ ಜೊತೆ ನಾಲ್ಕು ದಿನ ದೂಡಿ ಸಾವನ್ನಪ್ಪಿದ ಘಟನೆ ಉಡುಪಿಯ ಕುಂದಾಪುರ ತಾಲೂಕಿನ ದಾಸನಹಾಡಿ ಗ್ರಾಮದಲ್ಲಿ ಜರುಗಿದೆ.

ಗ್ರಾಮದ ನಿವಾಸಿ ತಾಯಿ ಜಯಂತಿ ಶೆಟ್ಟಿ(62) ಮಗಳು ಪ್ರಗತಿ ಶೆಟ್ಟಿ(32) ಮೃತಪಟ್ಟವರು. ಮನೆಯಲ್ಲಿ ತಾಯಿಯೇ ಅಡುಗೆ ಕೆಲಸ ಹಾಗೂ ಇತ್ಯಾದಿ ಮಾಡುತ್ತಿದ್ದರು. ತಾಯಿ ಮೃತಪಟ್ಟಿರುವುದು ಅರಿಯದೆ ಮಗಳು ಪ್ರಗತಿ ನಾಲ್ಕು ದಿನ ಅನ್ನ, ನೀರು ಇಲ್ಲದೆ ಕಳೆದಿದ್ದಾರೆ. ಇಂದು (ಮೇ.19) ಶವ ದುರ್ವಾಸನೆ ಬರಲು ಆರಂಭಿಸಿದೆ. ಅನುಮಾನಗೊಂಡ ಅಕ್ಕ-ಪಕ್ಕದ ಜನರು ಮನೆಯೊಳಗೆ ಬಂದು ನೋಡಿದಾಗ ಜಯಂತಿ ಶವ ಕಂಡಿದೆ. ಅಲ್ಲೇ ಪಕ್ಕದಲ್ಲಿ ಮಗಳು ಪ್ರಗತಿ ಕೂಡ ಅಸ್ವಶ್ಥಗೊಂಡು ಬಿದ್ದಿದ್ದಾರೆ. ಕೂಡಲೇ ಸ್ಥಳೀಯರು ಈ ವಿಚಾರವನ್ನು ಕುಂದಾಪುರ ಪೊಲೀಸರಿಗೆ ತಿಳಿಸಿದ್ದಾರೆ.

ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ತೀವ್ರ ಅಸ್ವಶ್ಥಗೊಂಡು ಬಿದ್ದಿದ್ದ ಪ್ರಗತಿ ಶೆಟ್ಟಿಯನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿ, ಜಯಂತಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಆಸ್ಪತ್ರೆಯಲ್ಲಿ ದಾಖಲಾಗಿದ್ದ ಪ್ರಗತಿಶೆಟ್ಟಿ ಚಿಕಿತ್ಸೆ ಫಲಿಸದೆ ಮೃತಪಟ್ಟರು. ಬಳಿಕ ಎರಡು ಶವಗಳ ಮರಣೋತ್ತರ ಪರೀಕ್ಷೆ ಮುಗಿದ ಮೇಲೆ ಕುಂದಾಪುರ ಪೊಲೀಸರು ಹೆಂಗವಳ್ಳಿಯಲ್ಲಿ ತಾಯಿ, ಮಗಳ ಅಂತ್ಯಸಂಸ್ಕಾರವನ್ನ ನೇರವೇರಿಸಿದರು.

Tags: