Mysore
33
scattered clouds

Social Media

ಶುಕ್ರವಾರ, 11 ಏಪ್ರಿಲ 2025
Light
Dark

ಡಾ. ಮನಮೋಹನ್ ಸಿಂಗ್ ಅವರಿಗೆ ಹುಬ್ಬಳ್ಳಿಯೊಂದಿಗೆ ಹತ್ತಿರದ ನಂಟಿದೆ: ಬಸವರಾಜ ಬೊಮ್ಮಾಯಿ

ಗದಗ: ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರಿಗೆ ಹುಬ್ಬಳ್ಳಿಯೊಂದಿಗೆ ಹತ್ತಿರದ ನಂಟಿದೆ. ಅವರ ಕೊ ಬ್ರದರ್ ಹಾಗೂ ಅವರ ಪತ್ನಿಯ ಸಹೋದರಿ ಹುಬ್ಬಳ್ಳಿಯಲ್ಲಿ ಇದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಗದಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಅಪರೂಪದ ರಾಜಕಾರಣಿ, ದೂರದೃಷ್ಟಿ ಉಳ್ಳ ಪ್ರಧಾನಿಯಾಗಿದ್ದರು. ದೇಶವನ್ನು ಆರ್ಥಿಕ ಸಂಕಷ್ಟದಿಂದ ದೂರ ಮಾಡಿದವರು.

ಆರ್ ಬಿಐ ಗೌರ್ನರ್ ಆಗಿ, ವಿಶ್ವಬ್ಯಾಂಕಿನ ಭಾರತದ ಪ್ರತಿನಿಧಿಯಾಗಿ ಭಾರತ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಅವರು ಸಂಪೂರ್ಣ ಜೀವನ ಮೀಸಲಿಟ್ಟಿದ್ದರು. ಅದರ ಪರಿಣಾಮ ಭಾರತ ಸಧೃಡ ಆರ್ಥಿಕ ಸ್ಥಿತಿಯಲ್ಲಿದೆ ಎಂದು ಹೇಳಿದರು.

ಇದರ ಜೊತೆಗೆ ಮನಮೋಹನ್ ಸಿಂಗ್ ಅವರಿಗೆ ಹುಬ್ಬಳ್ಳಿಯೊಂದಿಗೆ ಹತ್ತಿರವಾದ ನಂಟಿದೆ. ಅವರ ಕೊ ಬ್ರದರ್ ಹಾಗೂ ಅವರ ಪತ್ನಿಯ ಸಹೋದರಿ ಹುಬ್ಬಳ್ಳಿಯಲ್ಲಿ ಇರುವುದು ವಿಶೇಷ. ನಾವು ಯಾವಾಗಲೂ ಭೇಟಿ ಆದಾಗ ಹುಬ್ಬಳಿಯ ಬಗ್ಗೆ ಕೇಳುತ್ತಿದ್ದರು. ಬಹಳ ಕಾಳಜಿ ವಹಿಸುತ್ತಿದ್ದರು.

ಬೆಂಗಳೂರಿನ ಅಭಿವೃದ್ಧಿಯ ಬಗ್ಗೆಯೂ ಕಾಳಜಿ ಇದ್ದ ಮನಮೋಹನ್ ಸಿಂಗ್ ಅವರು ಬೆಂಗಳೂರು ಮೆಟ್ರೋ ಯೋಜನೆಗೆ ಸುಮಾರು 5 ಸಾವಿರ ಕೋಟಿ ರೂ. ನೀಡಿದ್ದಾರೆ. ದೇಶದ ಅಭಿವೃದ್ಧಿಯಲ್ಲಿ ಅವರ ಕೊಡುಗೆ ಬಹಳ ಇದೆ. ಅವರ ಅಗಲಿಕೆಯಿಂದ ದೇಶಕ್ಕೆ ದೊಡ್ಡ ನಷ್ಟವಾಗಿದೆ. ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ಭಗವಂತ ನೀಡಲಿ ಎಂದು ತಿಳಿಸಿದರು.

Tags: