Mysore
27
overcast clouds

Social Media

ಬುಧವಾರ, 28 ಜನವರಿ 2026
Light
Dark

ಮಂಡ್ಯ| ಅಪ್ರಾಪ್ತ ಹಿಂದೂ ಬಾಲಕಿ ಜೊತೆ ಮುಸ್ಲಿಂ ಯುವಕ ಪರಾರಿ; ಲವ್‌ ಜಿಹಾದ್‌ ಆರೋಪ

ಮಂಡ್ಯ: ಅಪ್ರಾಪ್ತ ಹಿಂದೂ ಬಾಲಕಿಯನ್ನು ಪ್ರೀತಿ ಹೆಸರಲ್ಲಿ ಪುಸಲಾಯಿಸಿ ಅನ್ಯಧರ್ಮೀಯ ಯುವಕ ಕರೆದೊಯ್ದ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ ನಡೆದಿದೆ.

ಪಟ್ಟಣದ 19 ವರ್ಷದ ಯುವಕ ಸೈಯದ್ ತಬ್ರೀಜ್ ವಿರುದ್ಧ ಲವ್ ಜಿಹಾದ್ ಆರೋಪಿಸಲಾಗಿದೆ. 15 ವರ್ಷದ ಅಪ್ರಾಪ್ತ ಬಾಲಕಿಯನ್ನು ಮುಸ್ಲಿಂ ಯುವಕನೋರ್ವ ಪ್ರೀತಿ ಹೆಸರಲ್ಲಿ ಕರೆದೊಯ್ದಿದ್ದಾನೆ ಎಂದು ಬಾಲಕಿ ಪೋಷಕರಿಂದ ಪಟ್ಟಣ ಪೊಲೀಸ್ ಠಾಣೆಯಲ್ಲಿ ಯುವಕನ ವಿರುದ್ಧ ದೂರು ನೀಡಲಾಗಿದೆ.

ದೂರಿನ ಬಳಿಕ ಪಟ್ಟಣ ಪೊಲೀಸರು ಬಾಲಕಿ ಹಾಗೂ ಯುವಕನನ್ನು ಪತ್ತೆ ಹಚ್ಚಿ ಕರೆತಂದಿದ್ದಾರೆ.

ಪಟ್ಟಣದಲ್ಲೂ ಅನ್ಯಧರ್ಮೀಯರಿಂದ ಲವ್ ಜಿಹಾದ್ ಮೂಲಕ ಹಿಂದೂ ಯುವತಿಯರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಈ ಪ್ರಕರಣವನ್ನು ಎನ್‌ಐಎಗೆ ವಹಿಸುವಂತೆ ಹಿಂದೂ ಸಂಘಟನೆಗಳು ಒತ್ತಾಯಿಸಿವೆ.

ಬಾಲಕಿ ಕರೆದೊಯ್ದು ಯುವಕನ ವಿರುದ್ಧ ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!