Mysore
23
overcast clouds
Light
Dark

ಮಂಡ್ಯ: ಕೆಆರ್‌ಎಸ್‌ ಜಲಾಶಯಕ್ಕೆ ಅಕ್ರಮ ಮೋಟಾರ್‌ ಅಳವಡಿಕೆ

ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್‌ ಜಲಾಶಯಕ್ಕೆ ಅಕ್ರಮವಾಗಿ ಮೋಟಾರ್‌ ಅಳವಡಿಕೆ ಮಾಡಿ ತಮ್ಮ ಫಾರ್ಮ್‌ ಹೌಸ್‌ಗಳಿಗೆ ನೀರು ಪೂರೈಕೆ ಮಾಡಿಕೊಳ್ಳುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.

ಕುಡಿಯುವ ನೀರಿನ ಸಮಸ್ಯೆ ನಡುವೆ ಅಕ್ರಮ ಮೋಟಾರ್ ಅಳವಡಿಸಿ ಕೆಆರ್​ಎಸ್ ಡ್ಯಾಂನಿಂದ ಫಾರ್ಮ್​ಹೌಸ್​ಗೆ ನೀರು ಪೂರೈಕೆ ಮಾಡಲಾಗುತ್ತಿದೆ. ಈ ಸಂಬಂಧ ಮಾಹಿತಿ ನೀಡಿದರೂ ಅಧಿಕಾರಿಗಳು ಕ್ರಮಕ್ಕೆ ಮುಂದಾಗುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಈ

ಕೆಆರ್​ಎಸ್​ ಡ್ಯಾಂನ ಹಿನ್ನೀರಿಗೆ ಹೊಂದಿಕೊಂಡು ಫಾರ್ಮ್ ಹೌಸ್ ಇದೆ. ಈ ಫಾರ್ಮ್​ಹೌಸ್​ಗೆ ಅಕ್ರಮವಾಗಿ ಮೋಟಾರ್ ಅಳವಡಿಕೆ ಮಾಡಿ ಸುಮಾರು 200 ಮೀ. ಪೈಪ್ ಅಳವಡಿಸಿಕೊಂಡು ಜಲಾಯಶಯದ ನೀರಿಗೆ ಕನ್ನ ಹಾಕಿ, ಅಕ್ರಮವಾಗಿ ಫಾರ್ಮ್​ಹೌಸ್​ಗೆ ನೀರು ಪೂರೈಕೆ ಮಾಡುತ್ತಿರುವ ಬಗ್ಗೆ ಸಾರ್ವಜನಿರು ಆಕ್ರೋಶ ಹೊರಹಾಕಿದ್ದಾರೆ.

ಬಗ್ಗೆ ಟಿವಿ 9 ವರದಿ ಮಾಡಿದ ಬೆನ್ನಲ್ಲೇ ಎಚ್ಚೆತ್ತ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಎಇ ಸುರೇಶ್ ಬಾಬು, ಎಇಇ ಕಿಶೋರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ವಿದ್ಯುತ್‌ ಕಡಿತಗೊಳಿಸಿ, ಕೆಆರ್‌ಎಸ್​​ ಹಿನ್ನೀರಿಗೆ ಅಳವಡಿಸಿದ್ದ ಮೋಟಾರ್​ಗಳನ್ನು ತೆರವು ಮಾಡಿದ್ದಾರೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ