Mysore
26
scattered clouds

Social Media

ಶುಕ್ರವಾರ, 13 ಫೆಬ್ರವರಿ 2026
Light
Dark

ಎರಡೇ ದಿನದಲ್ಲಿ ರೂ.716 ಕೋಟಿ ಮೌಲ್ಯದ ಮದ್ಯ ಮಾರಾಟ

ಬೆಂಗಳೂರು: ವರ್ಷಾಂತ್ಯ ಮತ್ತು ಹೊಸ ವರ್ಷದ ಸಂದರ್ಭದಲ್ಲಿ ರಾಜ್ಯದಾದ್ಯಂತ ಮದ್ಯ ಮಾರಾಟ ಭರ್ಜರಿಯಾಗಿ ನಡೆದಿದ್ದು, ಕೋಟಿ ಕೋಟಿ ಮೊತ್ತ ಸಂಗ್ರಹವಾಗಿದೆ.

ಡಿಸೆಂಬರ್‌ 28 ಮತ್ತು 31ರಂದು ಒಟ್ಟು ರೂ.716.58 ಕೋಟಿ ಮೊತ್ತದ ಮದ್ಯ ಮಾರಾಟವಾಗಿದೆ. ಎರಡೂ ದಿನ ಒಟ್ಟು 6.97 ಲಕ್ಷ ಪೆಟ್ಟಿಗೆ ಬಿಯರ್‌ ಮಾರಾಟವಾಗಿದ್ದರೆ, ಅದೇ ಅವಧಿಯಲ್ಲಿ 11.05 ಲಕ್ಷ ಪೆಟ್ಟಿಗೆಗಳ ಐಎಂಎಲ್‌ ಮಾರಾಟವಾಗಿದೆ. ಒಟ್ಟಾರೆ 18.03 ಲಕ್ಷ ಪೆಟ್ಟಿಗೆಗಳಷ್ಟು ಮದ್ಯ ಮಾರಾಟವಾಗಿದೆ.

ಎರಡೂ ದಿನಗಳಲ್ಲಿ ಒಟ್ಟು ರೂ.577.75ಕೋಟಿ ಮೊತ್ತದ ಐಎಂಎಲ್‌ ಮಾರಾಟವಾಗಿದ್ದರೆ, ರೂ.138.33ಕೋಟಿ ಮೊತ್ತದ ಬಿಯರ್‌ ಮಾರಾಟವಾಗಿದೆ. ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ದಾಖಲೆ ಸಂಖ್ಯೆಯಲ್ಲಿ ಮದ್ಯ ಮಾರಾಟವಾಗಿದೆ ಎಂದು ಮದ್ಯ ಮಾರಾಟಗಾರರ ಸಂಘಗಳ ಒಕ್ಕೂಟ ತಿಳಿಸಿದೆ.

Tags:
error: Content is protected !!