ಬೆಂಗಳೂರು: ಸಚಿವ ಎಚ್.ಕೆ.ಪಾಟೀಲ್‌ಗೆ ಜೀವ ಬೆದರಿಕೆ ಹಾಕಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸಚಿವ ಎಚ್.ಕೆ.ಪಾಟೀಲ್ ಅವರಿಗೆ ಫೇಸ್‌ಬುಕ್‌ನಲ್ಲಿ ಜೀವ ಬೆದರಿಕೆ ಹಾಕಲಾಗಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.
ವೀರಣ್ಣ ಬೀಳಗಿ ಎಂಬಾತ ಸೋಷಿಯಲ್ ಮೀಡಿಯಾದಲ್ಲಿ ಪ್ರಚೋದನಕಾರಿ ಪೋಸ್ಟ್ ಹಾಕಿದ್ದಾನೆ. ಸಚಿವರನ್ನು ಅವಹೇಳನಕಾರಿ ಪದಗಳಿಂದ ಬೈದು ಎಕ್47 ಗುಂಡಿನ ಮಳೆಗರೆಯಬೇಕು ಎಂದಿದ್ದನು.
ಕಾಂಗ್ರೆಸ್ ಮುಖಂಡ ಬಿವಿ ಅಸೂಟಿ ಅವರು ಗದಗ ನಗರದ ಬೆಟಗೇರಿ ಬಡಾವಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಆರೋಪಿ ರೋಣ ತಾಲ್ಲೂಕಿನ ಸೂಡಿ ಗ್ರಾಮದ ನಿವಾಸಿ ವೀರಣ್ಣ ಬೀಳಗಿಯನ್ನು ಬಂಧಿಸಿದ್ದಾರೆ.





