Mysore
22
light rain
Light
Dark

ವಿಧಾನಮಂಡಲ ಕಾರ್ಯಕಲಾಪ ಶುರುವಾದ ಬೆನ್ನಲ್ಲೆ ಸಭಾತ್ಯಾಗ ಮಾಡಿದ ವಿರೋಧ ಪಕ್ಷದ ನಾಯಕರು

ಬೆಂಗಳೂರು : ವಾರಾಂತ್ಯದ ಬಳಿಕ  ಇಂದು ವಿಧಾನಮಂಡಲ ಕಾರ್ಯಕಲಾಪಗಳು ಶುರುವಾದ ಕೂಡಲೇ ವಿರೋಧ ಪಕ್ಷದ ನಾಯಕರು ಶುಕ್ರವಾರ ಪಟ್ಟನ್ನು ಮುಂದುವರೆಸಿ ಸಭಾತ್ಯಾಗ ಮಾಡಿದರು.

ಸದನದಲ್ಲಿ ಇಂದು ನಡೆಯಬೇಕಿರುವ ಕಲಾಪಗಳ ಬಗ್ಗೆ ಸ್ಪೀಕರ್‌ ಯುಟಿ ಖಾದರ್‌ ವಿವರಣೆ ನೀಡಿದ ಬಳಿಕ ಎದ್ದುನಿಂತು ಮಾತನಾಡಿದ ವಿರೋಧ ಪಕ್ಷದ ನಾಯಕ ಅಶೋಕ್‌, ವಾಲ್ಮೀಕಿ ನಿಗಮದ ಹಗರಣವನ್ನು ಪ್ರಸ್ತಾಪಿಸಿ, ಸಿಎಂ ಸಿದ್ದರಾಮಯ್ಯ ನವರು ಸಮಂಜಸ ಉತ್ತರ ನೀಡಿಲ್ಲ. ಅವರು ಹಗರಣ ಬಗ್ಗೆ ಮಾತಾಡುವ ಬದಲು ಬಿಜೆಪಿ ಅಧೀಕಾರಾವಧಿಯಲ್ಲಿ ನಡೆದ ಹಗರಣಗಳ ಬಗ್ಗೆ ಮಾತನಾಡಿದರು. ಇದೊಂದು ದೊಡ್ಡ ಹಗರಣವಾಗಿದ್ದು,ಸಂಬಂಧಪಟ್ಟ ಸಚಿವರಯ ರಾಜೀನಾಮೆ ನೀಡಿದ್ದಾರೆ. ಆದರೆ ಸಿದ್ದರಾಮಯ್ಯ ರಾಜೀನಾಮೆ ನೀಡುವವರೆಗೆ ನಾವು ಹೋರಾಟ ಮುಂದುವರೆಸುತ್ತೇವೆ ಎಂದು ಹೇಳಿದರು.

ಇನ್ನು ಸಿಎಂ ರಾಜೀನಾಮೆ ನೀಡಬೇಕು ಎಂದು ಹೇಳುತ್ತಿದ್ದಂತೆ  ಕಾಂಗ್ರೆಸ್‌ ಶಾಸಕರಾದ ಕೋನರೆಡ್ಡಿ ಮತ್ತು ನಯನಾ ಮೋಟಮ್ಮ  ಇಬ್ಬರು ಕೆರಳಿದರು. ಅವರಿಬ್ಬರ ಮಾತುಗಳ ನಡುವೆ ಅಶೋಕ್‌ ನೇತೃತ್ವದ ವಿರೋಧ ಪಕ್ಷದ ನಾಯಕರು ಸಭಾತ್ಯಾಗ ಮಾಡಿದರು.