ಬೆಂಗಳೂರು: ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ನಡುವೆ ಸಮನ್ವಯದ ಕೊರತೆ ಎದ್ದು ಕಾಣುತ್ತಿದೆ ಎಂದು ಶಾಸಕ ಜಿ.ಟಿ.ದೇವೇಗೌಡ ಅಸಮಾಧಾನ ಹೊರಹಾಕಿದ್ದಾರೆ.
ಈ ಬಗ್ಗೆ ವಿಧಾನಸೌಧದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹೊಂದಾಣಿಕೆ ಮಾಡಿಕೊಂಡ ವಿಚಾರದಲ್ಲಿ ಸಮನ್ವಯತೆ ಇರಬೇಕು. ಆದರೆ ಬಿಜೆಪಿ-ಜೆಡಿಎಸ್‌ನಲ್ಲಿ ಆ ಕೊರತೆ ಎದ್ದು ಕಾಣುತ್ತಿದೆ. ಅವರೇ ಬೇರೆ ಇವರೇ ಬೇರೆ ಎಂಬಂತೆ ಇದ್ದಾರೆ. ಹಿಂದಿನಂತೆ ಪಕ್ಷ ಕಟ್ಟುವ ಪದ್ಧತಿ ಈಗ ಇಲ್ಲ. ಅವರವರಿಗೆ ಬೇಕಾದಂತೆ ನಡೆದುಕೊಳ್ಳುತ್ತಿದ್ದಾರೆ. ಹೆಚ್ಚೇನು ಹೇಳಲ್ಲ. ಎಂದರು.
ಇನ್ನು ನಿಖಿಲ್ ಕುಮಾರಸ್ವಾಮಿ ಪ್ರವಾಸ ಕುರಿತು ಮಾತನಾಡಿದ ಅವರು, ನಾನು ನನ್ನ ಕ್ಷೇತ್ರದ ಬಗ್ಗೆಯಷ್ಟೇ ಗಮನಹರಿಸುತ್ತಿದ್ದೇನೆ. ಪಕ್ಷದ ವಿಚಾರ ಗೊತ್ತಿಲ್ಲ ಎಂದರು.



