ಬೆಂಗಳೂರು: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಅಪ್ಪನಿಂದಲೇ ಮಗನಿಗೆ ಸೋಲಾಗಿದೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಲೇವಡಿ ಮಾಡಿದ್ದಾರೆ.
ಮೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರು, ನೂತನ ಶಾಸಕರಿಗೆ ಅಭಿನಂದನೆ ಸಲ್ಲಿಸಿದರು.
ಚನ್ನಪಟ್ಟಣ ಕ್ಷೇತ್ರದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಅವರು, ನಮ್ಮನ್ನೆಲ್ಲಾ ಗಲೀಜು ಎಂದಿದ್ದರು. ನಮ್ಮನ್ನು ಕಳೆದುಕೊಂಡು ಮಗನನ್ನು ಮೂರು ಬಾರಿ ಸೋಲಿಸಿದರು. ಕುಮಾರಸ್ವಾಮಿ ಅವರು ಆಡುವ ಮಾತು ಹಾಗೂ ನಡವಳಿಕೆಯಿಂದಲೇ ಮಗನಿಗೆ ಸೋಲಾಗಿದೆ. ನಿಖಿಲ್ ಸೋತಿದ್ದರೆ ಅದು ಕುಮಾರಸ್ವಾಮಿ ಅವರಿಂದ ಎಂದು ಲೇವಡಿ ಮಾಡಿದರು.
ಇನ್ನು ಮುಂದುವರಿದು ಮಾತನಾಡಿದ ಅವರು, ಇನ್ನಾದರೂ ಬೇರೆಯವರ ಬಗ್ಗೆ ಲಘುವಾಗಿ ಮಾತನಾಡದೇ ಕುಮಾರಸ್ವಾಮಿ ಸೌಜನ್ಯದಿಂದ ಮಾತನಾಡಬೇಕು. ಕುಮಾರಸ್ವಾಮಿ ಅವರ ನಡೆಯಿಂದ ನಿಖಿಲ್ ಬಲಿಪಶು ಆಗಿದ್ದಾರೆ. ಉಪಚುನಾವಣೆಯಲ್ಲಿ ನಮಗಿಂದ ಹೆಚ್ಚು ಹಣ ಖರ್ಚು ಮಾಡಿದ್ದಾರೆ. ಆದರೂ ಯಾಕೆ ಸೋತರೂ ಎಂದು ಪ್ರಶ್ನೆ ಮಾಡಿದರು.