Mysore
26
broken clouds

Social Media

ಬುಧವಾರ, 30 ಏಪ್ರಿಲ 2025
Light
Dark

ಅಮಿತ್‌ ಶಾ ಅವರನ್ನು ಗೂಂಡಾ ಎನ್ನುವ ಯತೀಂದ್ರ ಏನು? ಕುಮಾರಸ್ವಾಮಿ ಪ್ರಶ್ನೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಗೂಂಡಾ, ರೌಡಿ ಎಂದಿರುವುದನ್ನು ರಾಜ್ಯದ ಪ್ರಮುಖ ಬಿಜೆಪಿ-ಜೆಡಿಎಸ್‌ ನಾಯಕರು ತೀವ್ರವಾಗಿ ಖಂಡಿಸುತ್ತಿದ್ದಾರೆ.

ನಗರದ ಹೋಟೆಲೊಂದರಲ್ಲಿಂದು ಬಿಜೆಪಿ-ಜೆಡಿಎಸ್‌ ಸಮನ್ವಯ ಸಮಿತಿ ಸಭೆಯಲ್ಲಿ ಭಾಗವಹಿಸಲು ಆಗಮಿಸಿದ ನಾಯಕರು ಯತೀಂದ್ರ ಬಳಸಿರುವ ಭಾಷೆಯ ಬಗ್ಗೆ ತೀವ್ರ ಆಕ್ಷೇಪಣೆ ಎತ್ತಿದ್ದಾರೆ. ಸಂಸದ ಡಿವಿ ಸದಾನಂದಗೌಡ ಯತೀಂದ್ರರನ್ನು ಖಂಡಿಸಿದ ಬಳಿಕ ಜೆಡಿಎಸ್‌ ನಾಯಕ ಹೆಚ್‌ ಡಿ ಕುಮಾರಸ್ವಾಮಿ ಪರೋಕ್ಷವಾಗಿ ಯತೀಂದ್ರರನ್ನು ಗೂಂಡಾ ಎಂದಿದ್ದಾರೆ. ಕುಮಾರಸ್ವಾಮಿ ಪತ್ರಕರ್ತರೊಂದಿಗೆ ಮಾತನಾಡುವಾಗ ಮಾಧ್ಯಮ ಪ್ರತಿನಿಧಿಯೊಬ್ಬರು ಯತೀಂದ್ರ ಸಿದ್ದರಾಮಯ್ಯ ಅಮಿತ್‌ ಶಾರನ್ನು ಗೂಂಡಾ ಎಂದು ಕರೆದಿರುವ ಬಗ್ಗೆ ಕೇಳಿದಾಗ ಕುಮಾರಸ್ವಾಮಿ ಆಗಿದ್ರೆ ಯತೀಂದ್ರ ಏನಂತೆ? ಎಂದು ಮಾರ್ಮಿಕವಾಗಿ ಕೇಳಿದರು.

ಇದಕ್ಕೂ ಮೊದಲು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್‌ ಪಕ್ಷಗಳ ತಯಾರಿಯ ಬಗ್ಗೆ ಮಾತನಾಡಿದ ಕುಮಾರಸ್ವಾಮಿ ಎರಡೂ ಪಕ್ಷಗಳ ನಾಯಕರು ಜೊತೆಗೂಡಿ ಈಗಾಗಲೇ ಪ್ರಚಾರ ಆರಂಭಿಸಲಾಗಿದೆ. ನಿನ್ನೆ ಮೈಸೂರು ಮತ್ತು ಮಂಡ್ಯದಲ್ಲಿ ವಿಜಯೇಂದ್ರ, ಸಿಎನ್‌ ಅಶ್ವ‌ಥ್ ನಾರಾಯಣ್‌, ಜಿಟಿ ದೇವೇಗೌಡ, ತಾವು ಮತ್ತು ಇತರ ನಾಯಕರ ನೇತೃತ್ವದಲ್ಲಿ ಎರಡು ಪಕ್ಷಗಳ ಸಭೆ ನಡೆಸಲಾಗಿದೆ. ಬೆಂಗಳೂರಲ್ಲಿ ಆರ್‌ ಅಶೋಕ್‌ ಅವರ ಜೊತೆ ಚಿಕ್ಕಪೇಟೆ ಶಾಸಕರ ಮನೆಯಲ್ಲಿ ಸಭೆ ಸೇರಿ ಬೆಂಗಳೂರಿನ 4 ಲೋಕಸಭಾ ಕ್ಷೇತ್ರಗಗಳಲ್ಲಿ ಪ್ರಚಾರದ ರೂಪುರೇಷಗಳನ್ನು ಚರ್ಚಿಸಲಾಗಿದೆ ಎಂದರು.

Tags: