Mysore
29
broken clouds
Light
Dark

ಈಶ್ವರಪ್ಪ ಪುತ್ರನಿಗೂ ಅಶ್ಲೀಲ ವಿಡಿಯೋ ಭೀತಿ; ವಿಡಿಯೋ ಪ್ರಸಾರಕ್ಕೆ ಕೋರ್ಟ್‌ ನಿರ್ಬಂಧ

ಬೆಂಗಳೂರು: ಮಾಜಿ ಸಚಿವ ಕೆ.ಎಸ್‌ ಈಶ್ವರಪ್ಪ ಅವರ ಪುತ್ರ ಕೆ.ಇ ಕಾಂತೇಶ್‌ ಅವರಿಗೆ ಸಂಬಂಧಿಸಿದಂತೆ ಯಾವುದೇ ಮಾನಹಾನಿ ಸುದ್ದಿ ಪ್ರಕಟಿಸದಂತೆ ನಿರ್ಬಂಧ ವಿಧಿಸಿ ಬೆಂಗಳೂರಿನ ಸಿಟಿ ಸಿವಿಲ್‌ ನ್ಯಾಯಾಲಯ ಮಧ್ಯಂತರ ನಿರ್ಬಂಧಕಾಜ್ಞೆ ಹೊರಡಿಸಿದೆ.

ಕಾಂತೇಶ್‌ ಅವರಿಗೆ ಸಂಬಂಧಿಸಿ ಅಶ್ಲೀಲ ಪೋಟೊ, ವಿಡಿಯೋ, ಸ್ಕ್ರೀನ್‌ ಶಾಟ್‌ ಅಥವಾ ಆಡಿಯೋಗಳನ್ನು ಪ್ರಸಾರ ಮತ್ತು ಪ್ರಕಟಣೆ ಮಾಡುವುದಕ್ಕೆ‌ ನಿರ್ಭಂದ ಹೇರಿ ಕೋರ್ಟ್‌ ಏಪ್ರಿಲ್ 27 ರಂದು ಆದೇಶ ಹೊರಡಿಸಿದೆ.

ಲೋಕಸಭೆ ಚುನಾವಣೆ ವೇಳೆ ನನ್ನ ಹೆಸರಿಗೆ ಮಸಿ ಬಳಿಯುವ ಸಾಧ್ಯತೆ ಇದೆ. ಹೀಗಾಗಿ ಮುಂಜಾಗ್ರತವಾಗಿ ಮಾಧ್ಯಮಗಳಲ್ಲಿ ಮಾನಹಾನಿಕರ ದೃಶ್ಯ ಪ್ರಸಾರಕ್ಕೆ ನಿರ್ಬಂಧ ಕೋರಿ ಕಾಂತೇಶ್‌ ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯಕ್ಕೆ ದಾವೆ ಹೂಡಿದ್ದರು

ದಾವೆಯಲ್ಲಿ ಪ್ರತಿವಾದಿಗಳಾಗಿರುವ ವಿವಿಧ ಮಾಧ್ಯಮಗಳಿಗೆ ಸಮನ್ಸ್‌ ಜಾರಿಗೊಳಿಸಲು ಆದೇಶಿಸಲಾಗಿದ್ದು, ಈ ಸಂಬಂಧ ವಿಚಾರಣೆಯನ್ನು ಆಗಸ್ಟ್‌ 3ಕ್ಕೆ ಮುಂದೂಡಲಾಗಿದೆ.