ಬೆಂಗಳೂರು: ಗ್ರಾಹಕರಿಗೆ ಕೆಎಂಎಫ್ ಗುಡ್‌ನ್ಯೂಸ್ ನೀಡಿದ್ದು, ಹಾಲಿನ ಉತ್ಪನ್ನಗಳ ಬೆಲೆಯಲ್ಲಿ ಇಳಿಕೆ ಮಾಡಿದೆ.
ಕೆಎಂಎಫ್ ಪನ್ನೀರಿಗೆ ಕೆಜಿಗೆ 17ರೂ ಇಳಿಕೆಯಾಗಿದೆ. ಗುಡ್‌ಲೈಫ್ ಹಾಲಿನ ದರ 1 ಲೀಟರ್‌ಗೆ 2 ರೂ ಇಳಿಕೆಯಾಗಲಿದೆ. ಆದರೆ ಹಾಲು ಹಾಗೂ ಮೊಸರಿನ ದರ ಯಥಾಸ್ಥಿತಿ ಮುಂದುವರಿಯಲಿದೆ.
1000 ಎಂಎಲ್ ತುಪ್ಪ ಹಳೆಯ ದರ 650 ಇದ್ದರೆ, ಹೊಸದರ 610ರೂಪಾಯಿಗೆ ಇಳಿಕೆಯಾಗಿದೆ. 500 ಮಿಲಿ ಲೀಟರ್ ಬೆಣ್ಣೆಯ ಹಳೆಯ ದರ 306 ಇದ್ದರೆ ಹೊಸದರ 286 ರೂಪಾಯಿ ಇರಲಿದೆ. ಇನ್ನು 1 ಕೆಜಿ ಪನ್ನೀರ್ ಹಳೆಯ ದರ 425 ಇದ್ದರೆ, ಹೊಸ ದರ್ 408 ರೂಪಾಯಿ ಆಗಲಿದೆ.
70 ರೂ ಇದ್ದ ಲೀಟರ್ ಗುಡ್‌ಲೈಫ್ ಹಾಲು ಇನ್ನುಮುಂದೆ 68 ರೂಪಾಯಿ ಆಗಲಿದೆ. ಚೀಸ್ ಒಂದಕ್ಕೆ ಹಳೆಯ ದರ 480 ಇದ್ದರೆ ಹೊಸದರ 450 ರೂಪಾಯಿಗೆ ಇಳಿಕೆ ಮಾಡಲಾಗಿದೆ. ಸಂಸ್ಕರಿಸಿದ ಚೀಸ್ ಹಳೆಯದರ 530 ರೂ ಇದ್ದರೆ ಹೊಸದರ 497ಕ್ಕೆ ಇಳಿಕೆ ಮಾಡಲಾಗಿದೆ.
ಸೆಪ್ಟೆಂಬರ್.22ರಿಂದ ಈ ಪರಿಷ್ಕೃತ ದರ ಜಾರಿಗೆ ಬರಲಿದ್ದು, ಗ್ರಾಹಕರು ಕೊಂಚ ನಿರಾಳರಾಗಿದ್ದಾರೆ.





