ಬೆಂಗಳೂರು: ಜಿಎಸ್‌ಟಿ ದರ ಇಳಿಕೆ ಸಂಭ್ರಮದಲ್ಲಿದ್ದ ಜನತೆಗೆ ಕೆಎಂಎಫ್ ಬಿಗ್ ಶಾಕ್ ಕೊಟ್ಟಿದ್ದು, ನಂದಿನಿ ತುಪ್ಪದ ಏಕಾಏಕಿ 90ರೂ ಏರಿಕೆ ಮಾಡಿದೆ.
ನಂದಿನಿ ತುಪ್ಪದ ದರ ಪ್ರತಿ ಕೆಜಿಗೆ 90ರೂ ಏರಿಕೆ ಮಾಡಿ ಆದೇಶ ಹೊರಡಿಸಲಾಗಿದ್ದು, ಇಂದಿನಿಂದಲೇ ನೂತನ ದರ ಜಾರಿಗೆ ಬರಲಿದೆ ಎಂದು ತಿಳಿಸಿದೆ.
ಈ ಹಿಂದೆ 1 ಕೆಜಿ ತುಪ್ಪಕ್ಕೆ 610ರೂ ಇತ್ತು. ಸದ್ಯ 90ರೂಗೆ ಏರಿಕೆ ಮಾಡಿರುವುದರಿಂದ 700ರೂಗೆ ಏರಿಕೆಯಾಗಿದೆ.





