Mysore
22
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಬಸವಣ್ಣನವರ ಬಗ್ಗೆ ಯತ್ನಾಳ್‌ ಲಘು ಹೇಳಿಕೆ: ಖಂಡ್ರೆ ಖಂಡನೆ

ಬೀದರ್‌: ಬಿಜೆಪಿ ಶಾಸಕ ಬಸವಗೌಡ ಪಾಟೀಲ ಯತ್ನಾಳ್‌ ಅವರು ಆರ್‌ಎಸ್‌ಎಸ್‌ ಅವರನ್ನು ಖುಷಿಪಡಿಸಲು ವಿಶ್ವಗುರು ಬಸವಣ್ಣನವರ ಬಗ್ಗೆ ಲಘು ಹಾಗೂ ಹಗುರವಾಗಿ ಹೇಳಿಕೆ ನೀಡಿರುವುದು ಖಂಡನೀಯ ಎಂದು ಸಚಿವ ಈಶ್ವರ್‌ ಖಂಡ್ರೆ ಕಿಡಿಕಾರಿದ್ದಾರೆ.

ಬೀದರ್‌ನಲ್ಲಿ ಇಂದು(ಡಿ.1) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯತ್ನಾಳ್‌ ವಕ್ಫ್‌ ಮಂಡಳಿ ಪ್ರತಿಭಟನೆ ವೇಳೆ ನಾವೆಲ್ಲರೂ ಹೋರಾಟಕ್ಕೆ ಹೆದರಿ ಹೋರಾಟ ಮಾಡದಿದ್ದರೆ, ಬಸವಣ್ಣನವರ ರೀತಿ ಹೊಳೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂಬ ಹೇಳಿಕೆ ನೀಚ ಕೆಲಸದಂತಿದೆ. ವಿನಾಶಕಾಲ ವಿಪರೀತ ಬುದ್ಧಿ ಎಂಬ ಗಾದೆಯಂತೆ ಅವರು ಈ ರೀತಿಯ ಹೇಳಿಕೆ ನೀಡಿದ್ದಾರೆ. ಹೀಗಾಗಿ ಅದರ ಫಲವನ್ನು ಬಸವಣ್ಣನವರ ಭಕ್ತರು ನೀಡುತ್ತಾರೆ ಎಂದು ಹೇಳಿದ್ದಾರೆ.

ಯತ್ನಾಳ್‌ ವೈಯಕ್ತಿಕ ಸ್ವಾರ್ಥ ಮತ್ತು ಪಕ್ಷದ ಆಂತರಿಕ ಕಲಹಗಳ ಸ್ವಾರ್ಥಕ್ಕಾಗಿ ವಕ್ಫ್‌ ಮಂಡಳಿ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಎಲ್ಲಾ ನಾಟಕಗೊತ್ತಿರುವ ಬಿಜೆಪಿ ನಾಯಕರು ಸುಮ್ಮನಿದ್ದು, ಬಸವಣ್ಣನವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರೂ ಪ್ರತಿಕ್ರಿಯೆ ನೀಡುತ್ತಿಲ್ಲ. ಅಲ್ಲದೇ ಚುನಾವಣೆ ಸಂದರ್ಭದಲ್ಲಿ ಬಸವ ಭಕ್ತರ ಹತ್ತಿರ ಮತ ಕೇಳುವ ಬಿಜೆಪಿಯವರು ಇಂದು ಮೌನಂ ಸಮ್ಮತಿ ಲಕ್ಷಣಂ ಎಂಬಂತೆ ವರ್ತಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಯತ್ನಾಳ್‌ ಜೋಕರ್‌ ಅಷ್ಟೇ ಅಲ್ಲ, ಮಾನಸಿಕ ರೋಗಿಯೂ ಹೌದು. ಹೀಗಾಗಿ ಅವರು ವೈದ್ಯರ ಬಳಿ ಚಿಕಿತ್ಸೆ ಪಡೆಯುವುದು ಸೂಕ್ತವಾಗಿದೆ. ಯತ್ನಾಳ್‌ ಹೇಳಿಕೆಯಿಂದ ಬಸವ ಭಕ್ತರಿಗೆ ನೋವು ಉಂಟಾಗಿದ್ದು, ಇದಕ್ಕೆ ಬಿಜೆಪಿ ನಾಯಕರು ಉತ್ತರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

 

Tags: