ಬೆಂಗಳೂರು ಗ್ರಾಮಾಂತರ: ಅನಾಮಧೇಯ ಟಿಟ್ವರ್ ಖಾತೆಯಿಂದ ಕೆಂಪೇಗೌಡ ಅಂತರಾಷ್ಟ್ರೀಯ ಏರ್‌ಪೋರ್ಟ್‌ಗೆ ಒಂದೇ ತಿಂಗಳಿನಲ್ಲಿ 2ನೇ ಬಾರಿಗೆ ಬಾಂಬ್ ಬೆದರಿಕೆ ಸಂದೇಶ ರವಾನೆಯಾಗಿದೆ.
ಈ ಬೆದರಿಕೆ ಸಂದೇಶಕ್ಕೆ ಸಂಬಂಧಿಸಿದಂತೆ ಬಾಂಬ್ ಬೆದರಿಕೆ ಸಂದೇಶ ರವಾನೆ ಮಾಡಿದವರ ವಿರುದ್ಧ ಕೆಂಪೇಗೌಡ ಏರ್‌ಪೋರ್ಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಬಾಂಬ್ ಬೆದರಿಕೆ ಸಂದೇಶ ಕಳೆದ ವಾರ ಹಿಂದೆಯಷ್ಟೇ ಬೆದರಿಕೆ ರವಾನೆಯಾಗಿತ್ತು. ಆದರೆ, ಇಂದು ಮತ್ತೆ ಸಂದೇಶ ರವಾನೆಯಾದ ಬೆನ್ನಲ್ಲೇ ಏರ್‌ಪೋರ್ಟ್ ಅಧಿಕಾರಿಗಳು ಆಲರ್ಟ್ ಆಗಿದ್ದಾರೆ. ಅಲ್ಲದೇ, ಇಂಡಿಗೋ ಏರ್‌ಲೈನ್ಸ್‌ನ lX 233, lX 375, lX 481, lX 383, lX 549, lX 399 ವಿಮಾನಗಳಲ್ಲಿ ಬಾಂಬರ್‌ಗಳಿರುವುದಾಗಿ ಸಂದೇಶ ರವಾನಿಸಿದ್ದಾರೆ.