ಕಾಸರಗೋಡು: ಹಳಿ ದಾಟುವಾಗ ಯುವಕ ಸಾವನ್ನಪ್ಪಿರುವ ಘಟನೆ ಕಾಸರಗೋಡು ನಿಲ್ದಾಣದಲ್ಲಿ ನಡೆದಿದೆ.
ಕೊಡಗು ಜಿಲ್ಲೆ ಗೋಣಿಮಾಗೂರಿನ ಸೋಮವಾರಪುರದ ಚೆನ್ನಯ್ಯ ಅವರ ಪುತ್ರ ರಾಜೇಶ್ ಎಂಬುವವರೇ ಮೃತಪಟ್ಟಿರುವ ದುರ್ದೈವಿಯಾಗಿದ್ದಾರೆ.
ರೈಲು ಹಳಿ ದಾಟಿ ಫ್ಲಾಟ್ ಫಾರಂ ಹತ್ತಲು ಯತ್ನಿಸುತ್ತಿದ್ದಾಗ ಗೂಡ್ಸ್ ರೈಲು ಡಿಕ್ಕಿ ಹೊಡೆದು ರಾಜೇಶ್ ಮೃತಪಟ್ಟಿದ್ದಾರೆ.
ರೈಲಿನಿಂದ ಇಳಿದು ಅಜಾಗರೂಕತೆಯಿಂದ ಹಳಿ ದಾಟಿ ನಿಲ್ದಾಣದ ಫ್ಲಾಟ್ ಫಾರಂ ಹತ್ತಲು ಪ್ರಯತ್ನಿಸಿದ್ದೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗಿದೆ.





