Mysore
27
broken clouds
Light
Dark

ದ್ವಿತೀಯ ಪಿಯು ಫಲಿತಾಂಶ: ಉತ್ತೀರ್ಣರಾದವರ ವಿಭಾಗವಾರು ವಿವರ

ಬೆಂಗಳೂರು: ಇಂದು ( ಏಪ್ರಿಲ್‌ 10 ) ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದೆ. ಒಟ್ಟಾರೆ 5,52,690 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, 81.15% ಫಲಿತಾಂಶ ಬಂದಿದೆ.

ನಿರೀಕ್ಷೆಯಂತೆ ಈ ಬಾರಿಯೂ ರಾಜ್ಯಕ್ಕೆ ದಕ್ಷಿಣ ಕನ್ನಡ ಜಿಲ್ಲೆ ಅಗ್ರಸ್ಥಾನವನ್ನು ಪಡೆದುಕೊಂಡಿದ್ದು, ಉಡುಪಿ ಎರಡನೇ ಸ್ಥಾನದಲ್ಲಿದೆ ಹಾಗೂ ವಿಜಯಪುರ ಮೂರನೇ ಸ್ಥಾನದಲ್ಲಿದೆ. ಇನ್ನು ಈ ಬಾರಿ ಒಟ್ಟು 6,81,079 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 5,52,690 ಉತ್ತೀರ್ಣರಾಗಿದ್ದಾರೆ.

ಇನ್ನು ಯಾವ ವಿಭಾಗದಲ್ಲಿ ಎಷ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು ಹಾಗೂ ಉತ್ತೀರ್ಣರಾದವರೆಷ್ಟು ಎಂಬ ಮಾಹಿತಿ ಈ ಕೆಳಕಂಡಂತಿದೆ..

ಕಲಾ ವಿಭಾಗ: ಪರೀಕ್ಷೆ ಬರೆದವರು – 1,87,891, ಉತ್ತೀರ್ಣರಾದವರು – 1,28,448, ಶೇ. 68.36
ವಾಣಿಜ್ಯ ವಿಭಾಗ: ಪರೀಕ್ಷೆ ಬರೆದವರು – 2,15,357, ಉತ್ತೀರ್ಣರಾದವರು – 1,74,315, ಶೇ. 80.94
ವಿಜ್ಞಾನ ವಿಭಾಗ: ಪರೀಕ್ಷೆ ಬರೆದವರು – 2,77,831, ಉತ್ತೀರ್ಣರಾದವರು – 2,49,927, ಶೇ. 89.96

Tags: