Mysore
21
overcast clouds
Light
Dark

ರಾಜ್ಯದ 20 ಪೊಲೀಸ್‌ ಅಧಿಕಾರಿಗಳಿಗೆ ರಾಷ್ಟ್ರಪತಿಗಳ ಪದಕ

ಬೆಂಗಳೂರು: 78ನೇ ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯ ಕೊಡಮಾಡುವ ವಿಶಿಷ್ಟ ಸೇವಾ ಪದಕ ಹಾಗೂ ಸಾರ್ಥಕ ಸೇವಾ ಪದಕಕ್ಕೆ ರಾಜ್ಯದ 20 ಪೊಲೀಸ್‌ ಅಧಿಕಾರಿಗಳು ಭಾಜನರಾಗಿದ್ದಾರೆ.

ರಾಜ್ಯದ 20 ಪೊಲೀಸ್‌ ಅಧಿಕಾರಿಗಳು, ಸಿಬ್ಬಂದಿಗೆ ರಾಷ್ಟ್ರಪತಿಗಳ ಪದಕ ಒಲಿದಿದೆ. ಇಬ್ಬರು ಅಧಿಕಾರಿಗಳಿಗೆ ರಾಷ್ಟ್ರಪತಿಗಳ ಅತ್ಯುತ್ತಮ ಸೇವಾ ಪದಕ ಘೋಷಣೆಯಾಗಿದೆ. ಐಎಸ್‌ಡಿ, ಎಡಿಜಿಪಿ ಎಂ ಚಂದ್ರಶೇಖರ್‌ ಹಾಗೂ ಅಗ್ನಿಶಾಮಕ ದಳದ ಸೀನಿಯರ್‌ ಕಮಾಂಡರ್‌ ಬಸವಲಿಂಗಪ್ಪ ಅವರಿಗೆ ಅತ್ಯುತ್ತಮ ಸೇವಾ ಪದಕ ಘೋಷಿಸಲಾಗಿದೆ.

ಅಧಿಕಾರಿಗಳು ಪೊಲೀಸ್‌ ಇಲಾಖೆಯಲ್ಲಿ ಸಲ್ಲಿಸಿದ ಗಣನೀಯ ಸೇವೆಯನ್ನು ಪರಿಗಣಿಸಿ, ಕೇಂದ್ರ ಗೃಹ ಸಚಿವಾಲಯ ಪದಕ ಘೋಷಣೆ ಮಾಡಲಾಗಿದ್ದು, ನಾಳೆ ಪದಕ ಪ್ರದಾನ ಮಾಡಲಾಗುತ್ತದೆ.