Mysore
22
overcast clouds

Social Media

ಶನಿವಾರ, 30 ಮೇ 2026
Light
Dark

ಮಾರ್ಚ್.‌22ಕ್ಕೆ ಕರ್ನಾಟಕ ಬಂದ್:‌ ಪರೀಕ್ಷೆ ಮುಂದೂಡಿಕೆ ಮಾಡಲ್ಲ ಎಂದ ಸಚಿವ ಮಧು ಬಂಗಾರಪ್ಪ

ಬೆಂಗಳೂರು: ಇದೇ ಮಾರ್ಚ್.‌22ರಂದು ಕರ್ನಾಟಕ ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಈಗಾಗಲೇ ನಿಗದಿಯಾಗಿರುವ ಯಾವುದೇ ಪರೀಕ್ಷೆಗಳನ್ನು ಮುಂದೂಡಿಕೆ ಮಾಡಲು ಸಾಧ್ಯವಿಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

ಈ ಬಗ್ಗೆ ಬೆಂಗಳೂರಿನಲ್ಲಿಂದು ಮಾತನಾಡಿದ ಅವರು, ಈಗಾಗಲೇ ಮಾರ್ಚ್.‌22ರಂದು 7, 8 ಮತ್ತು 9ನೇ ತರಗತಿ ಪರೀಕ್ಷೆಗಳು ನಿಗದಿಯಾಗಿವೆ. ಕರ್ನಾಟಕ ಬಂದ್‌ ಎಂದು ಈಗ ಪರೀಕ್ಷೆಗಳನ್ನು ಮುಂದೂಡಿಕೆ ಮಾಡಲು ಸಾಧ್ಯವಿಲ್ಲ. ಒಂದು ವೇಳೆ ಬಂದ್‌ ಇದ್ದರೂ ಯಾವುದೇ ಪರೀಕ್ಷೆಗಳನ್ನು ಮುಂದೂಡಿಕೆ ಮಾಡಲು ಸಾಧ್ಯವಿಲ್ಲ. ಪರೀಕ್ಷೆ ಅದರ ಪಾಡಿಗೆ ಅದು ನಡೆಯುತ್ತದೆ ಎಂದರು.

ಇನ್ನು ಬಂದ್‌ ಮಾಡುವ ಹೋರಾಟಗಾರರು ಯಾರೂ ಕೂಡ ಮಕ್ಕಳಿಗೆ ಎಕ್ಸಾಂಗೆ ಹೋಗಬೇಡಿ ಎಂದು ಹೇಳಲ್ಲ. ಮಕ್ಕಳು ಗೊಂದಲ ಆಗೋದು ಬೇಡ. ಈಗಾಗಲೇ ವೇಳಾಪಟ್ಟಿ ಸಿದ್ಧತೆ ಮಾಡಿ ಪ್ರಕಟಿಸಿದ್ದೇವೆ. ವೇಳಾಪಟ್ಟಿ ಬದಲಾವಣೆ ಆದರೆ ಕಷ್ಟ ಆಗುತ್ತದೆ ಎಂದರು.

 

 

Tags:
error: Content is protected !!