ಬೆಂಗಳೂರು: ಅನಾಮಿಕ ವ್ಯಕ್ತಿಯೋರ್ವ ಕಾಂತಾರ ಬೆಡಗಿ ರುಕ್ಮಿಣಿ ವಸಂತ್ ಹೆಸರಿನಲ್ಲಿ ಸಾರ್ವಜನಿಕರಿಂದ ಹಣ ಕೇಳುತ್ತಿರುವ ಘಟನೆ ಬೆಳಕಿಗೆ ಬಂದಿದೆ.
ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿರುವ ರುಕ್ಮಿಣಿ ವಸಂತ್ ಅವರು, ಅನಾಮಿಕ ವ್ಯಕ್ತಿಯೋರ್ವ ನನ್ನ ಹೆಸರಿನಲ್ಲಿ ಹಣ ಕೇಳುತ್ತಿದ್ದಾನೆ. ಯಾರೂ ಕೂಡ ಆತನನ್ನು ನಂಬಿ ಹಣ ಕೊಡಬೇಡಿ ಎಂದು ಮನವಿ ಮಾಡಿದ್ದಾರೆ.
ಇದನ್ನು ಓದಿ: ಮೈಸೂರು | ಸೈಬರ್ ವಂಚಕರಿಂದ 21 ಲಕ್ಷಕ್ಕೂ ಹೆಚ್ಚ ಹಣ ಕಳೆದುಕೊಂಡ ಮಹಿಳೆ
ಆ ವ್ಯಕ್ತಿ ನನ್ನಂತೆ ನಟಿಸಿ ಎಲ್ಲರ ಬಳಿಯೂ ಹಣ ಕೇಳುತ್ತಿದ್ದಾನೆ. ಆ ನಂಬರ್‌ನಿಂದ ಬರುವ ಸಂದೇಶಗಳು ಸಂಪೂರ್ಣವಾಗಿ ನಕಲಿಯಾಗಿವೆ.
ದಯವಿಟ್ಟು ಅಂತಹ ಸಂದೇಶಗಳಿಗೆ ಪ್ರತಿಕ್ರಿಯೆ ನೀಡಬೇಡಿ. ಈ ಸೋಗು ಹಾಕುವ ಕೃತ್ಯವು ಸೈಬರ್ ಅಪರಾಧದ ವ್ಯಾಪ್ತಿಗೆ ಬರುತ್ತದೆ. ಅಂತಹ ವಂಚನೆ ಹಾಗೂ ದಾರಿತಪ್ಪಿಸುವ ಚಟುವಟಿಕೆಗಳಲ್ಲಿ ಭಾಗಿಯಾಗಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ.
ಯಾವುದೇ ಸ್ಪಷ್ಟೀಕರಣ ಅಥವಾ ಪರಿಶೀಲನೆಗಾಗಿ ನೀವು ನೇರವಾಗಿ ನನ್ನನ್ನು ಅಥವಾ ನನ್ನ ತಂಡವನ್ನು ಸಂಪರ್ಕಿಸಬಹುದು. ನಿಮ್ಮ ತಿಳುವಳಿಕೆ ಮತ್ತು ಸಹಕಾರಕ್ಕಾಗಿ ಎಲ್ಲರಿಗೂ ಧನ್ಯವಾದಗಳು. ಆನ್‌ಲೈನ್‌ನಲ್ಲಿ ಜಾಗರೂಕರಾಗಿರಿ ಮತ್ತು ಸುರಕ್ಷಿತವಾಗಿರಿ ಎಂದು ಟ್ವೀಟ್‌ನಲ್ಲಿ ಮನವಿ ಮಾಡಿದ್ದಾರೆ.





