Mysore
27
overcast clouds

Social Media

ಸೋಮವಾರ, 23 ಜೂನ್ 2025
Light
Dark

ಪೆನ್‌ಡ್ರೈವ್‌ ಪ್ರಕರಣ: ನಾಳೆ ಡಿಕೆ ಶಿವಕುಮಾರ್‌ ಹಾಗೂ ಶಿವರಾಮೇಗೌಡರ ವಿರುದ್ಧ ಜೆಡಿಎಸ್‌ ಪ್ರತಿಭಟನೆ

ಬೆಂಗಳೂರು: ಹಾಸನ ಎಂಪಿ ಪ್ರಜ್ವಲ್‌ ರೇವಣ್ಣ ಅವರದ್ದು ಎನ್ನಲಾದ ಪೆನ್‌ಡ್ರೈವ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನೇ ದಿನೇ ಒಂದೊಂದು ತಿರುವು ಪಡೆದುಕೊಳ್ಳುತ್ತಿದೆ. ಮಾಜಿ ಸಂಸದ ಎಲ್‌.ಆರ್‌ ಶಿವರಾಮೇಗೌಡ ಮತ್ತು ವಕೀಲ ದೇವರಾಜೇಗೌಡ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್‌ ಆಗಿದೆ.

ಈ ಆಡಿಯೋದಲ್ಲಿ ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ ವರಿಷ್ಠ ಎಚ್‌.ಡಿ ದೇವೇಗೌಡರ ವಿರುದ್ಧವಾಗಿ ಅವಹೇಳನಕಾರಿ ಹೇಳಿಕೆ ನೀಡಿರುವುದನ್ನು ಖಂಡಿಸಿ ಜೆಡಿಎಸ್‌ ನಾಳೆ(ಮೇ.೨೦) ಪ್ರತಿಭಟನೆ ನಡೆಸಲು ಮುಂದಾಗಿದೆ.

ಈ ಸಂಬಂಧ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಮಾಜಿ ಶಾಸಕ ಎಚ್‌.ಎಂ ರಮೇಶ್‌ ಗೌಡ, ರಾಜ್ಯ ಸರ್ಕಾರದ ದುರಾಡಳಿತ ಹಾಗೂ ಮಾಜಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರ ಕುಮ್ಮಕ್ಕಿನಿಂದ ಎಲ್‌.ಅರ್‌ ಶಿವರಾಮೇಗೌಡ, ಮಾಜಿ ಪ್ರಧಾನಿ ದೇವೇಗೌಡರ ವಿರುದ್ಧ ವೈಯಕ್ತಿಕವಾಗಿ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಇದನ್ನು ಖಂಡಿಸಿ ಡಿಕೆಶಿ ಹಾಗೂ ಶಿವರಾಮೇಗೌಡ ವಿರುದ್ಧ ಬೆಂಗಳೂರು ಮಹಾನಗರ ಜನತಾದಳ ವತಿಯಿಂದ ಸೋಮವಾರ ಬೆಳಿಗ್ಗೆ 11 ಗಂಟೆಗೆ ಪ್ರೀಡಂ ಪಾರ್ಕ್‌ನಲ್ಲಿ ಬೃಹತ್‌ ಪ್ರತಿಭಟನೆ ಏರ್ಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

Tags:
error: Content is protected !!