Mysore
21
overcast clouds

Social Media

ಶನಿವಾರ, 22 ಆಗಸ್ಟ್ 2026
Light
Dark

ಮೇಕೆದಾಟು ಯೋಜನೆಗೆ ಸ್ಟಾಲಿನ್‌ ಒಪ್ಪಿಸಲಿ ; ಜೆಡಿಎಸ್‌ ಒತ್ತಾಯ

ಬೆಂಗಳೂರು : ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮೇಕೆದಾಟು ಯೋಜನೆಗೆ ಅಡ್ಡಗಾಲು ಹಾಕುತ್ತಿರುವ ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಅವರ ಬಳಿ ಯೋಜನೆಗೆ ಒಪ್ಪಿಸುವ ಕೆಲಸ ಮಾಡಲಿ, ಕನ್ನಡಿಗರ ಹಿತವನ್ನು ಕಾಪಾಡಲಿ ಎಂದು ಜೆಡಿಎಸ್ ಒತ್ತಾಯಿಸಿದೆ.

ಈ ಸಂಬಂಧ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಜೆಡಿಎಸ್, ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕನ್ನಡಪರ ಹೋರಾಟಗಾರರೂ ಸಹ ಇಂದು ಕರ್ನಾಟಕ ಬಂದ್ ಮಾಡಿದ್ದಾರೆ. ಆದರೆ, ಶಿವಕುಮಾರ್ ಇಂದು ಚೆನ್ನೈ ಪ್ರವಾಸ ಕೈಗೊಂಡಿದ್ದಾರೆ ಎಂದು ಟೀಕಿಸಿದೆ.

ನಮ್ಮ ನೀರು, ನಮ ಹಕ್ಕು ಎಂದು ಢೋಂಗಿ ಪಾದಯಾತ್ರೆ ಮಾಡಿ, ಅಧಿಕಾರಕ್ಕೆ ಬಂದರೇ ಮೇಕೆದಾಟು ಯೋಜನೆ ಜಾರಿಮಾಡುತ್ತೇವೆ ಎಂದು, ಜನರಿಗೆ ಚೊಂಬು ಕೊಟ್ಟಿರುವ ಕಾಂಗ್ರೆಸ್ ಎಂದು ಜೆಡಿಎಸ್ ಆರೋಪಿಸಿದೆ.

ರಾಜಕೀಯ ಬದಿಗಿಟ್ಟು ರಾಜ್ಯದ ಅಭಿವೃದ್ಧಿ ಬಗ್ಗೆ ಗಮನ ಹರಿಸಿ. ಇಂಡಿ ಕೂಟದ ಮಿತ್ರ ಪಕ್ಷವಾದ ಡಿಎಂಕೆ ಜೊತೆ ಹೊಂದಾಣಿಕೆ ರಾಜಕೀಯ ಬಿಟ್ಟು, ಕರ್ನಾಟಕದ ಹಿತರಕ್ಷಣೆ ಮಾಡಲಿ ಎಂದು ಆಗ್ರಹಿಸಿದೆ.

Tags:
error: Content is protected !!