ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಅವರ ಜಾಮೀನು ಅರ್ಜಿ ವಿಚಾರಣೆ ಎರಡೂ ದಿನಗಳಿಂದ ನಡೆಯುತ್ತಿದ್ದು, ಎಸ್‌ಪಿಪಿ ಪ್ರತಿವಾದಕ್ಕೆ ಅವಕಾಶ ಕೇಳಿದ್ದರಿಂದ ಅ.8 ಕ್ಕೆ ಮುಂದೂಡಲಾಗಿದೆ ಎಂದು 57ನೇ ಸಿಸಿಎಚ್ ನ್ಯಾಯಾಲಯ ತಿಳಿಸಿದೆ.
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಿನ್ನೆ(ಅ.4) ಮತ್ತು ಇಂದು ನಟ ದರ್ಶನ್ ಪರ ಹಿರಿಯ ವಕೀಲ ಸಿ.ವಿ.ನಾಗೇಶ್ ಅವರು, ಚಾರ್ಜ್‌ಶೀಟ್‌ನಲ್ಲಿರುವ ಲೂಫೋಲ್‌ಗಳ ಆಧಾರದ ಮೂಲಕ ಸುದೀರ್ಘ ನ್ಯಾಯ ಮಂಡಿಸಲಾಗಿದೆ. ಬಳಿಕ ಪ್ರತಿವಾದಕ್ಕೆ ಎಸ್‌ಪಿಪಿ ಕಾಲಾವಕಾಶ ಕೋರಿದ್ದರಿಂದ ಅ.8 ರಂದು ಮಧ್ಯಾಹ್ನ 12.30ಕ್ಕೆ ಜಾಮೀನು ಅರ್ಜಿ ವಿಚಾರಣೆಯನ್ನು ವಿಸ್ತರಿಸಲಾಗಿದೆ.
ಇಂದು ಜಾಮೀನು ನಿರೀಕ್ಷೆಯಲ್ಲಿದ್ದ ಆರೋಪಿ ಎ2 ದರ್ಶನ್‌ಗೆ ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ಮುಂದೂಡಿದ್ದರಿಂದ ನಿರಾಸೆಯಾಗಿದೆ.
ಪ್ರಕರಣದ ಆರೋಪಿ ಎ1 ಪವಿತ್ರ ಗೌಡ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಸಹ ಅ.8 ರಂದೇ ನಡೆಸಲಾಗುವುದು ಎಂದು ನ್ಯಾಯಾಲಯ ತಿಳಿಸಿದೆ.