Mysore
36
few clouds

Social Media

ಶುಕ್ರವಾರ, 24 ಏಪ್ರಿಲ 2026
Light
Dark

ಡಿಕೆಶಿ ಜೈಲಿಗೆ ಹೋಗಿ ಶಾಸಕರ ಬೆಂಬಲ ಕೇಳಿದ್ದು ನಾಚಿಕೆಗೇಡು: ಆರ್.ಅಶೋಕ್‌

Resign and Fulfill the Aspirations of Kannadigas: Opposition Leader R. Ashoka

ಬೆಂಗಳೂರು: ರಾಜ್ಯದಲ್ಲಿ ಸರ್ಕಾರ ಸತ್ತು ಹೋಗಿದೆ. ಸಿಎಂ-ಡಿಸಿಎಂ ನಡುವಿನ ಕಿತ್ತಾಟ ಹೊಡೆದಾಡಿಕೊಳ್ಳುವ ಹಂತಕ್ಕೆ ಹೋಗಿದೆ ಎಂದು ವಿಪಕ್ಷ ನಾಯಕ ಆರ್‌.ಅಶೋಕ್‌ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದಿದೆ. ಸಿಎಂ ಹಾಗೂ ಡಿಸಿಎಂ ನಡುವೆ ಅಧಿಕಾರಕ್ಕಾಗಿ ಕಿತ್ತಾಟ ನಡೆಯುತ್ತಿದೆ. ಇದು ತಾರಕಕ್ಕೇರಿದೆ. ಸಿದ್ದರಾಮಯ್ಯ ತಾನೇ 5 ವರ್ಷ ಸಿಎಂ ಆಗಿ ಮುಂದುವರಿಯುತ್ತೇನೆ ಎಂದು ಹೇಳಿದ್ದಾರೆ. ಅದಕ್ಕೆ ಡಿಸಿಎಂ ಡಿಕೆಶಿ ಒಳ್ಳೆಯದಾಗಲಿ ಎಂದಿದ್ದಾರೆ. ಆದರೆ ಸಚಿವರ, ಶಾಸಕರ ಪ್ರತ್ಯೇಕ ಸಭೆಗಳನ್ನು ಮಾಡಿ ಬೆಂಬಲ ಪಡೆಯುವ ಪ್ಲಾನ್‌ ಮಾಡುತ್ತಿದ್ದಾರೆ. ಸಾಲದ್ದಕ್ಕೆ ನಿನ್ನೆ ಜೈಲಿಗೆ ಹೋಗಿ ಅಲ್ಲಿರುವ ಇಬ್ಬರು ಶಾಸಕರು ಬೆಂಬಲ ಕೇಳಿದ್ದಾರೆ. ಕಾಂಗ್ರೆಸ್‌ಗೆ ಇಂತಹ ಪಾಡು ಬಂದಿರುವುದು ಶೋಚನೀಯ ಸ್ಥಿತಿ ಎಂದು ಗುಡುಗಿದರು.

ಡಿಸಿಎಂ ಡಿಕೆಶಿ ಜೈಲಿಗೆ ಹೋಗಿ ಶಾಸಕರ ಬೆಂಬಲ ಕೇಳಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ. ಜೈಲು ಪಾಲಾಗಿರುವ ಶಾಸಕರ ಬೆಂಬಲ ಕೇಳಲು ಜೈಲಿಗೆ ಹೋಗಿ ಚರ್ಚಿಸಿದ್ದಾರೆ ಎಂದರೆ ರಾಜ್ಯದ ಜನತೆ ತೀರ್ಮಾನ ಮಾಡಬೇಕು. ರಾಜ್ಯದ ಇತಿಹಾಸದಲ್ಲೇ ಇಂತಹ ಘಟನೆ ನಡೆದಿರಲ್ಲ ಎಂದು ವಾಗ್ದಾಳಿ ನಡೆಸಿದರು.

Tags:
error: Content is protected !!