Mysore
22
haze

Social Media

ಶನಿವಾರ, 27 ಡಿಸೆಂಬರ್ 2025
Light
Dark

ಸ್ಥಳೀಯವಾಗಿ ಬಿಜೆಪಿಯೊಂದಿಗೆ ಮೈತ್ರಿ ಹೊಂದಾಣಿಕೆ ಕಷ್ಟ : ಎಚ್‌ಡಿಡಿ

ಬೆಂಗಳೂರು : ಲೋಕಸಭೆ, ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯೊಂದಿಗಿನ ಮೈತ್ರಿ ಮುಂದುವರೆಯಲಿದ್ದು, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹೊಂದಾಣಿಕೆ ಕಷ್ಟವಾಗುತ್ತದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ ಹೊಂದಾಣಿಕೆ ಕಷ್ಟವಾಗಲಿದೆ. ನಮ ಶಕ್ತಿ ಇರುವ ಕಡೆ ನಾವು ಹೋರಾಟ ಮಾಡುತ್ತೇವೆ ಎಂದರು.

ನಗರ ಸ್ಥಳೀಯ ಸಂಸ್ಥೆಗಳ ಹೊಂದಾಣಿಕೆ ವಿಚಾರವನ್ನು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹಸಚಿವ ಅಮಿತ್ ಶಾ ಅವರ ಜೊತೆ ಚರ್ಚೆ ಮಾಡಲು ಸಾಧ್ಯವೇ?, ಈ ವಿಚಾರದಲ್ಲಿ ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷರು ಅವರ ನಿಲುವನ್ನು ಸ್ಪಷ್ಟಪಡಿಸಿದ್ದಾರೆ ಎಂದು ಹೇಳಿದರು.

ಜ.25 ರಂದು ಮೈಸೂರಿನಲ್ಲಿ ಅಹಿಂದಾ ಸಮಾವೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಡುತ್ತಿದ್ದಾರೆ. ಯಾವ ಲೇಬಲ್‍ನಲ್ಲಿ ಅವರು ಮಾಡುತ್ತಿದ್ದಾರೆ. ಅಹಿಂದಾ ಬಗ್ಗೆ ವ್ಯಾಖ್ಯಾನ ಮಾಡಿ ವಿವರಿಸುವುದು ಕಷ್ಟ ಎಂದ ಅವರು, ಮುಖ್ಯಮಂತ್ರಿಯಾಗಿದ್ದವರು ಅಹಿಂದಾ ನಾಯಕರೇ ಆಗಿದ್ದರೇ, ಒಂದು ಕ್ಷೇತ್ರ ಹುಡುಕಲು ಒಂದು ವರ್ಷ ಕಾಲ ಎಷ್ಟು ಚರ್ಚೆ ಮಾಡಿದರು ಎಂದು ಪ್ರಶ್ನಿಸಿದರು.

ಮೈಸೂರು, ಬಾದಾಮಿ, ಕೋಲಾರ ಎಲ್ಲಿ ನಿಲ್ಲಬೇಕೆಂಬ ವರ್ಷಕಾಲ ಚರ್ಚೆ ಮಾಡಿದರು. ಅಹಿಂದಾ ನಾಯಕರೇ ಆಗಿದ್ದರೆ ರಾಜ್ಯದ ಯಾವುದೇ ಕ್ಷೇತ್ರದಲ್ಲಾದರೂ ನಿಂತು ಗೆಲ್ಲಬಹುದಾಗಿತ್ತು. ಕಳೆದ ಚುನಾವಣೆಯಲ್ಲಿ ಪುತ್ರ ಸಿದ್ದರಾಮಯ್ಯ ಅವರಿಗೆ ಕ್ಷೆತ್ರ ಬಿಟ್ಟುಕೊಡಬೇಕಾಯಿತು ಎಂದರು.

ಇದನ್ನು ಓದಿ: ಸಿಲಿಂಡರ್ ಸ್ಪೋಟ ಪ್ರಕರಣ | ಮೃತ ಸಲೀಂ ಜೊತೆ ಬಂದವರು ನಾಪತ್ತೆ‌ ; ಲಾಡ್ಜ್‌ ಶೋಧ

ಸಿದ್ದರಾಮಯ್ಯ ಅವರು ನನ್ನ ಬಗ್ಗೆ ಕಠಿಣವಾಗಿ ಮಾತನಾಡಿದ್ದಾರೆ. ಅವರ ಹಿರಿಯ ಮಗ ನಿಧನವಾದಾಗ ಮನೆಗೆ ಹೋಗಿದ್ದೆ. ಈ ವಯಸ್ಸಲ್ಲೂ ಎಷ್ಟು ದುಡಿಯುತ್ತಿ?ರಿ? ಎಂದು ಕೇಳಿದ್ದರು. ನೀವೆಲ್ಲಾ ಪಕ್ಷ ಬಿಟ್ಟು ಹೋದ ಮೇಲೆ ಪಕ್ಷ ಉಳಿಲು ದುಡಿಯುತ್ತಿದ್ದೇನೆ. ಹೀಗೆ ಎರಡನೇ ಪುತ್ರನನ್ನು ರಾಜಕೀಯಕ್ಕೆ ತಂದಿದ್ದಾರೆ. ಒಳಮೀಸಲಾತಿಯಲ್ಲಿ ಯಾವಯಾವ ಜಾತಿಗೆ ಎಷ್ಟೆಷ್ಟು ಮೀಸಲಾತಿ ಕೊಟ್ಟಿದ್ದೀರಿ ಎಂಬುದನ್ನು 16 ಬಜೆಟ್ ಮಂಡಿಸಿದ ಸಿದ್ದರಾಮಯ್ಯನವರು ಹೇಳಬೇಕು ಎಂದು ಆಗ್ರಹಿಸಿದರು.

ದೇಶದಲ್ಲಿ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳಾ ಮೀಸಲಾತಿ ತಂದವರ್ಯಾರು?, ಮುಸ್ಲಿಂರಿಗೆ ಮೀಸಲಾತಿ ಕಲ್ಪಿಸಿದವರ್ಯಾರು? ಎಂದು ಪ್ರಶ್ನಿಸಿದರು.
ಕೇರಳದಲ್ಲಿ ಜೆಡಿಎಸ್ ಪಕ್ಷ ಎಡಪಂಥೀಯ ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಳ್ಳುತ್ತದೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು.

ಜ.18 ರಂದು ಬೆಂಗಳೂರಿನಲ್ಲಿ ಪಕ್ಷದ ಕಾರ್ಯಕರ್ತರ ಸಭೆಯನ್ನು ಮಾಡುತ್ತೆ?ವೆ. ಜ.23 ರಂದು ಹಾಸನದಲ್ಲಿ ಪಕ್ಷದ ಕಾರ್ಯಕ್ರಮ ಮಾಡುತ್ತೆ?ವೆ. ಜ.24 ರಂದು ಬಾಗಲಕೋಟೆಯಲ್ಲಿ ಸಭೆ ಮಾಡಲು ತೀರ್ಮಾನಿಸಿದ್ದೇವೆ ಎಂದರು.

Tags:
error: Content is protected !!