ಬೆಂಗಳೂರು : ಸಚಿವರು ಊಟಕ್ಕೆ ಸೇರುವುದೇ ಅಪರಾಧವೇ? ಅದರ ಬಗ್ಗೆ ಪದೇಪದೇ ಏಕೆ ಪ್ರಶ್ನೆಗಳನ್ನು ಕೇಳಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ವಿಧಾನಸೌಧದ ಮುಂಭಾಗ ಕಿತ್ತೂರು ಉತ್ಸವ ಜ್ಯೋತಿಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಚಿವರು ನಾವು ಪದೇ ಪದೇ ಊಟಕ್ಕೆ ಒಟ್ಟಾಗಿ ಸೇರುತ್ತಿರುತ್ತೇವೆ, ಅದರಲ್ಲಿ ತಪ್ಪೇನೆಂದು ಪ್ರಶ್ನಿಸಿದರು.
ಇದನ್ನೂ ಓದಿ:-RSS | ತಾಕತ್ತಿದ್ದರೆ ನನ್ನನ್ನು ನಿಷೇಧಿಸಿ ; ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ
ಸಚಿವರು ಊಟಕ್ಕೆ ಸೇರಬಾರದು ಎಂಬಂತೆ ಬಿಜೆಪಿಯವರು ಹೇಳುತ್ತಿದ್ದಾರೆ. ಅದೇನು ಅಪರಾಧವೇ? ಈ ವಿಚಾರ ಪದೇಪದೇ ಚರ್ಚೆಯಾಗುತ್ತಿರುವುದೇಕೆ? ಎಂದು ತಿರುಗೇಟು ನೀಡಿದರು.
ಬಿಜೆಪಿಯವರ ನಿಲುವೇ ನನಗೆ ಅರ್ಥವಾಗುತ್ತಿಲ್ಲ ಎಂದು ಸಿಡಿಮಿಡಿ ವ್ಯಕ್ತಪಡಿಸಿದ ಸಿದ್ದರಾಮಯ್ಯ ಅವರು, ಸಚಿವರ ಔತಣಕೂಟವನ್ನು ಬಲವಾಗಿ ಸಮರ್ಥಿಸಿಕೊಂಡರು.
ಶಾಲಾ, ಕಾಲೇಜು, ಸರ್ಕಾರಿ ಸಂಸ್ಥೆಗಳ ಆವರಣದಲ್ಲಿ ಆರ್‍ಎಸ್‍ಎಸ್‍ನ ಚಟುವಟಿಕೆಗಳನ್ನು ನಿಯಂತ್ರಿಸುವಂತೆ ಸಚಿವ ಪ್ರಿಯಾಂಕ್ ಖರ್ಗೆ ಪತ್ರ ಬರೆದಿರುವ ಬಗ್ಗೆ ಸಿದ್ದರಾಮಯ್ಯ ಪ್ರತಿಕ್ರಿಯಿಸಲು ನಿರಾಕರಿಸಿದರು.





